Showing posts with label ಮಾಡು ದಾನಧರ್ಮಪರ ಉಪಕಾರವ purandara vittala. Show all posts
Showing posts with label ಮಾಡು ದಾನಧರ್ಮಪರ ಉಪಕಾರವ purandara vittala. Show all posts

Friday, 6 December 2019

ಮಾಡು ದಾನಧರ್ಮಪರ ಉಪಕಾರವ purandara vittala

ಪುರಂದರದಾಸರು
ಮಾಡು ದಾನಧರ್ಮಪರ ಉಪಕಾರವ ಮರೆಯದಿರೆಚ್ಚರಿಕೆ ಪ.

ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||

ಬಾಳು ಬದುಕುಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1

ಮೂಢರ ಒಡನಾಡಿ ಮುಂದೆ ಕೆಡಲು ಬೇಡಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆಕಂಡ್ಯ ನಟನೆ ಬೇಡೆಚ್ಚರಿಕೆ 2

ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |ನಿನ್ನಾಯು ಮುಗಿದಿರಲು ಯಮದೂತರುಬಂದು ಎಳೆಯುವರೆಚ್ಚರಿಕೆ 3

ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂನೆರೆನಂಬು ಎಚ್ಚರಿಕೆ 4

ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದುಮುಂದೆ ನೋಡೆಚ್ಚರಿಕೆ 5

ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |ಎಂದೆಂದು ಅಗಲದ ಬಂಧು ಶ್ರೀಹರಿನಮಗೆಂದು ನೋಡೆಚ್ಚರಿಕೆ 6

ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ 7
*********