ಮಾಮವ ರಘುವೀರ ಮಾನಿತ ಮುನಿವರ
ಭೂಮಿಸುತ ನಾಯಕ ಭಕ್ತಜನ
ಕಾಮಿತ ಫಲದಾಯಕ ಗರ್ವಿತ ಸು
ತ್ರಾಮ ತನಯವಿರಾಮ ನೃಪತಿ ಲ
ಲಾಮ ದಶರಥರಾಮ ಸಮರೋ
ದ್ದಾಮ ದಶಮುಖ ಸಾಮಜ
ಮೃಗೇಂದ್ರ ಕೋಸಲಪುರೀಂದ್ರ 1
ದಿನಕರಕುಲದೀಪ ದ್ರುತದಿವ್ಯ ಶರಚಾಪ
ವನಜ ಸನ್ನಿಭಗಾತ್ರಾ ಯೋಗಿವರ್ಯ
ಸನಕಾದಿಮತಿಪಾತ್ರ ನಭೋಮಣಿ
ತನುಜಶರಣ ಪವನಜಮುಖ ಪರಿ
ಜನ ಜಗದಹಿತ ದನುಜ ಮದಹಾರ
ಮನುಜ ತನುಧರ ವನಜದಳ ನಯನ ಅಗಣಿತಗುಣಗಣಾ 2
ಭಂಡನೋದ್ಗತ ರೋಷಪಾಲಿತ ಗೌತಮಯೋಷ
[ದಂಡಿತ ಮಾರೀಚ ಅಮಿತ ಯತಿವಿರಸವನಅಬ್ದಿಗರ್ವ
ಖಂಡಕನಾರಾಚ ಕುಂಡಲಕವಿತ
ಗಂಡ ಯುಗವೇ ದಂಡ ಕರಭುಜ
ದಂಡ ಹಿಮಕರ ಖಂಡಧರ ಕೋ
ದಂಡ ದಳ ಚರಣಾ ಅಗಣಿತ ಗುಣಗಣ 3
ಘಟಿತ ನಾನಾಭೂಷ ಕವಿತಾಶ್ರಿತ ಪೋಷ
ಕಟಿದೂಪಮಿತವಾಸನ ಶ್ರೀಕೋಸಲೇಶ
ಮಠಬೇಧನ ನಿವಾಸನ ಇಂದ್ರನೀಲಾಭ
ಕುಟಿಲ ಕಚವೃತ ನಿಟಿಲತಟಮಣಿ
ಪಟಲ ಖಚಿತಮಕುಟಲಸಿತ ಮೃದು
ಚಟುಲಪಿತನತಜಟಿಲ ಮೂಲಧನ ದರಹಸಿತವದನ 4
ಮಾಮವ ರಘುವೀರ ಪರಮ ಪುರುಷ ಹರಿ
ಗೋವಿಂದಂ ಸಿರಿಧರ ನಾರಾಯಣ
****