ರಾಗ - : ತಾಳ -
ಶ್ರೀನಿವಾಸನೆ ನಿನ್ನ ನಾಮದಿಂದಲಿ ಯನಗೆ l
ಮಾನ ಬಹುಮಾನುಂಟೆ ನಾರಾಯಣಾ l
ಏನೇನು ವಲ್ಲೆ ಇದರೆನ್ನ ಹೆಚ್ಚಿಗೆ ನಿನ್ನ l
ನಾನು ಬೇಡುವನಲ್ಲ ನಾರಾಯಣಾ ll ಪ ll
ಚಿತ್ತ ಚಿಂಚಲ ಬಿಡಿಸು ನಿತ್ಯ ಅಮೃತವ ಕುಡಿಸು l
ಉತ್ತುಮಾದತಿ ಶ್ರದ್ಧೆ ನಾರಾಯಣ l
ಯೆತ್ತತ್ತ ತೊಲಗದಂತೆ l
ಚಿತ್ತೈಸಬೇಕೊ ತ್ವರ ನಾರಾಯಣಾ ll 1 ll
ಜ್ಞಾನವನು ನೀ ಬಲಿಸು ಧ್ಯಾನವನು ದೃಢ ನಿಲಿಸು l
ವಾಣಿಯಿಂದಲಿ ವಚನ ನಾರಾಯಣ l
ಮಾಣದಲೆ ನಡಸು ಸುರಧೇನು ಸುರತರು l
ಅನುಮಾನ ಮಾಡುವದ್ಯಾಕೊ ನಾರಾಯಣ ll 2 ll
ಆರಾರು ಎನಗಿಲ್ಲ ಅಧಮಾಧಮನಿಹೆನೊ l
ದೂರ ನೋಡಲಿಬ್ಯಾಡ ನಾರಾಯಣ ಪೂರ್ಣ l
ದಯವಿರಲಯ್ಯ ಪ್ರದ್ಯುಮ್ನವಿಟ್ಠಲ ಕೇಳ್ l
ಕ್ಷೀರಸಾಗರಶಾಯಿ ನಾರಾಯಣ ll 3 ll
***