Showing posts with label ಚಿಂತೆ ಮಾಡುವುದ್ಯಾಕೆ ಮನವೆ ನೀನು vijaya vittala. Show all posts
Showing posts with label ಚಿಂತೆ ಮಾಡುವುದ್ಯಾಕೆ ಮನವೆ ನೀನು vijaya vittala. Show all posts

Wednesday, 16 October 2019

ಚಿಂತೆ ಮಾಡುವುದ್ಯಾಕೆ ಮನವೆ ನೀನು ankita vijaya vittala

ಚಿಂತೆ ಮಾಡುವುದ್ಯಾಕೆ ಮನವೆ ನೀನು
ಕರ್ಮ ಎಂದಿಗಾದರೂ ಬಿಡದು ಪ

ಮಗÀನಾರು ನೀನಾರು ಪೇಳೊ ಸಿದ್ಧ
ನಿಗಮಾರ್ಥಗಳಿಂದ ಸಜ್ಜನರ ಕೇಳೊ
ತಗಿದು ಕಳಿ ಶೋಕದ ಗೋಳು ನಿತ್ಯ
ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ 1

ಸಾಹನಶಕ್ತಿಯನ್ನು ಮಾಡೊ ಬರಿದೆ
ಸ್ನೇಹ ಮಾಡಿದರಿಂದ e್ಞÁನಕ್ಕೆ ಕೇಡು
ತಾಹಾದು ಸ್ಥಿರವೆಂದು ನೋಡೊ ನೀನೂ
ಮಾಹಪದವಿಗೆ ಬಂದೆ ಸುದೃಢವೆ ಬೇಡು2

ವಿರಕ್ತಿ ತೊಡು ತೊಡು ಬಿಡದೆ ಎಂದು
ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ
ವಾರವಾರಕೆ ಹೀಗೆ ಕೆಡದೇ ಶ್ರಿಂ
ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ 3
*********