Showing posts with label ಗುರುವೇ ಶ್ರೀ ವಸುಧೇಂದ್ರ ಕರಜಾತ pranesha vittala. Show all posts
Showing posts with label ಗುರುವೇ ಶ್ರೀ ವಸುಧೇಂದ್ರ ಕರಜಾತ pranesha vittala. Show all posts

Monday, 11 November 2019

ಗುರುವೇ ಶ್ರೀ ವಸುಧೇಂದ್ರ ಕರಜಾತ ankita pranesha vittala

by ಪ್ರಾಣೇಶದಾಸರು
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||ಶರಣು ನಿನ್ನಯ ಪದಸರಸಿಜಯುಗಗಳಿಗೆ |ಎರವುಮಾಡದೆ ಕಾಯೊಪರಮದಯಾಳು ಪ

ದಾತಾಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ 1

ದೋಷರಹಿತ ಯನ್ನಕ್ಲೇಶಹಿಂಗಿಸೊ ಸಂ |ನ್ಯಾಸಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿಮಾಡದೆ ರವಿಭಾಸ ಗುಣಾಢ್ಯ 2

ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳುಮಾನನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ 3
*******