Showing posts with label ಯಾಕೆ ಮೈದೋರೆ ಗುರುರಾಯಾ ನಮ್ಮ ಸಾಕಿಸಲಹುವಾ gurumahipati. Show all posts
Showing posts with label ಯಾಕೆ ಮೈದೋರೆ ಗುರುರಾಯಾ ನಮ್ಮ ಸಾಕಿಸಲಹುವಾ gurumahipati. Show all posts

Wednesday, 1 September 2021

ಯಾಕೆ ಮೈದೋರೆ ಗುರುರಾಯಾ ನಮ್ಮ ಸಾಕಿಸಲಹುವಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ಯಾಕೆ ಮೈದೋರೆ ಗುರುರಾಯಾ | ನಮ್ಮ | ಸಾಕಿಸಲಹುವಾ ಮಹಿಪತಿ ಭಕ್ತ ಪ್ರೀಯಾ ಪ 


ಶರಣರುಪಚಾರ ಭಕುತಿಯ ಮನಿಲಿ ಸಿಲುಕಿದೆಯೋ | ದುರಿತ ಪರಿಹರಿಸಲಿಕ್ಕೆ ತೊಡಗಿದೆಯೋ | ಬೋಧ ಕೇಳಿಸಿದೆಯೋ ಪೂರ್ವ | ಜರ ಮುಕುತಿಗಾಣಿಸಲು ಹೋಗಿ ಆಲಿಸಿದೆಯೊ 1 

ಕಂಗೆಡುತಲಿವೇ ನಿಮ್ಮ ಕಾಣದೀ ನಯನಗಳು | ಭಂಗು ಬಡುತಿವೇ ನುಡಿಯ ಕೇಳದೆ ಶ್ರವಣಗಳು | ಅಂಗ ಸಂಗಕ ಸಿರಕರಗಳು ಮರುಗಿ \ ಮುಂಗಾಣ ವೆದೆಗೆಟ್ಟು ಕರಣ ವೃತ್ತಿಗಳು 2 

ಮಂದ ಭಾಗ್ಯರಿಗೆ ನಿಧಾನ ಮರಿಯಾದಂತೆ | ಇಂದು ಮಾಡಲಿ ಬ್ಯಾಡಾ ನ್ಯೂ ನಾರಿಸುದುಚಿತವೇ | ನಂದನರ ಸಲಹು ದಯದಿಂದ ಮೋದಲಂತೆ 3

***