Showing posts with label ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ gadugina veeranarayana. Show all posts
Showing posts with label ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ gadugina veeranarayana. Show all posts

Wednesday, 1 September 2021

ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ankita gadugina veeranarayana

 ..

kruti by ವೀರನಾರಾಯಣ Veeranarayana 

ಶ್ರೀ ರಾಘವೇಂದ್ರರು


ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ


ತಾಪವಿನ್ನಿದು ಮನವು ಹಿಡಿದುದುಪಾಪಿಯೆನ್ನನು ಕ್ಷಮಿಸಲಾರಿರ ಅ.ಪ


ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ 1


ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ 2


ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ವೀರನಾರಾಯಣಭಕುತರ ಸಲಹದೆ 3

***