ಧನ್ಯ ಧನ್ಯವಾಯಿತು ಎನ್ನ ಜನುಮ ತನ್ನಿಂದ ತಾನೊಲಿದ ಘನ ಮಹಿಮ ಎನ್ನೊಳಗೆ ದೋರಿತಾನಂದೊ ಬ್ರಹ್ಮ ಕಣ್ಣಾರೆ ಕಂಡೆನು ಸದ್ಗುರು ಧರ್ಮ 1
ಬ್ರಹ್ಮಸುಖ ಹೊಳೆಯಿತು ಸಾಧುಸಂಗ ಚುಮು ಚುಮು ಕೊಡುತಿದೆಕೊ ಸರ್ವಾಂಗ ಧಿಮಿ ಧಿಮಿಗುಡುತ ತಾಲ ಮೃದಂಗ ಸಮಾರಂಭವಾಯಿತು ಬಾಹ್ಯಂತರಂಗ 2
ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ ಒದಗಿ ಕೈಗೂಡಿತೆನಗೆ ತ್ವರಿತ ಸಾಧಿಸಿತು ಮಹಿಪತಿಯ ಮನೋರಥ ಸದ್ಗುರು ಕೃಪೆಯಾಯಿತು ತಾ ಸದೋದಿತ 3
***