Showing posts with label ರಾಗದಿ ಭಜಿಪರ ಪಾಲಿಪ ಪ್ರಭುವೆ mangalangahari vittala. Show all posts
Showing posts with label ರಾಗದಿ ಭಜಿಪರ ಪಾಲಿಪ ಪ್ರಭುವೆ mangalangahari vittala. Show all posts

Monday, 6 September 2021

ರಾಗದಿ ಭಜಿಪರ ಪಾಲಿಪ ಪ್ರಭುವೆ ankita mangalangahari vittala

 ankita ಮಂಗಳಾಂಗಹರಿವಿಠಲ 

ರಾಗ: ರೀತಿಗೌಳ ತಾಳ: ಆದಿ


ರಾಗದಿ ಭಜಿಪರ ಪಾಲಿಪ ಪ್ರಭುವೆ

ಘನ ಭಕುತರ ನೀ ಸಂತತ ಸಲಹುವೆ

ವೇಂಕಟೇಶನ ಪಾದ ಪದುಮ ಪೂಜಿಸುವೆ

ದ್ರವಿತನಾಗಿ ದರಿದ್ರರ ಮೊರೆ ಲಾಲಿಸುವೆ


ರಾಶಿರಾಶಿಗೈದ ಪಾಪಗಳಳಿದು

ಘನಸುಜ್ಞಾನ ಗ್ರಂಥಗಳೊರೆದು

ವೇಂಕಟನ ಕಿಂಕರ ಸಂಕಟ ಕಳೆದು

ದ್ರವಿತ ಘೃತ ಧಾರೆಯಂತೆ ಭಕ್ತಿಯನೆರೆದು 1

ರಾಮನ ಮೂರ್ತಿಯನುರಾಗದಿ ಭಜಿಸುವ 

ಘನವಾದ ಮಹಿಮೆ ಪವಾಡವ ತೋರಿಸುವ

ವೇಂಕಟಭಟ್ಟನೆ ರಾಘವೇಂದ್ರ ಮುನಿಪ

ದ್ರವ್ಯ ಧನ ವಸ್ತ್ರದಾಸೆಯೆ ನೀಗಿಪ 2

ರಾಘವನಂಘ್ರಿ ಸರೋಜ ಭ್ರಮರ

ಘನಶ್ಯಾಮ ಸುಂದರನ ಚರಣ ಚಕೋರ

ವೇಂಕಟನಾಥ ವೈಣಿಕಚತುರ

ದ್ರಷ್ಟವ್ಯ ಮಂಗಳಾಂಗಹರಿವಿಠಲನ ಪ್ರಿಯಕರ 3

***