Showing posts with label ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ tandevaradagopala vittala. Show all posts
Showing posts with label ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ tandevaradagopala vittala. Show all posts

Thursday, 5 August 2021

ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ಪ


ಅಮಂಗಳಗಳ ನೀಡುವೋ ಪರಮನೀಚ ಅಂಗನಿಯಳಿಗೆ ಅ.ಪ.


ಮಂಗಳಾತ್ಮಜ ನಿನ್ನ ಅನುಗಾಲ ಕಂಗಳಿಂದಲಿ ನೋಡಿ ಸುಖಿಸುವೋಡಿಂಗನಾ ಭಂಗಪಡಿಸುತಿಹಳಿ 1

ಪರಮ ಅದ್ಭುತ ಮೂಗುತಿಯೆ ನಿನ್ನ ಅದ್ಭುತ-ಚರಿಯವ ತೋರು ಭೂತನಾಥಾ 2

ಭಕ್ತವತ್ಸಲನೆಂಬ ಬಿರುದು ಬೇಕಾದರೆ ನಂಬಿದ ಭಕುತರನು ಪಾಲಿಸಿ ಬಿರುದು ಪಡಿಯೋ 3

ಶಕುತಿ ಇಲ್ಲದ ಕಾರಣದಿ ವಿಷಕೂಪದೊಳು ಬಿದ್ದು ಘನ ಪಾಪಕೊಳಗಾದೆನೋ ವಿಷಕಂಠನೇ 4

ಹಂಸರೂಢನಾದ ದಾಸ ನಿನ್ನ ದಾಸರನು ಕ್ಲೇಶಪಡಿಸುವರ ಧ್ವಂಸಗೈಯೋ ತಂದೆವರದಗೋಪಾಲನಭಜಕಾ 5

***