ರಾಗ - : ತಾಳ -
ಜಗನ್ನಿವಾಸ ಜಾನಕೀರಮಣ ll ಪ ll
ನಿಗಮಗೋಚರ ಹರಿ ನಗಧರ ಭವಹರ
ಅಗಣಿತ ಚರಿತಾನಂದ ಮುಕುಂದಾ ll 1 ll
ಶಂಖ ಚಕ್ರ ಗದ ಶಾಂರ್ಗ್ಯಪಾಣಿ
ಪಂಕಜೋದರ ಪಾಲಕ ಪಾವನ ll 2 ll
ಗರುಡ ಗಮನ ಕರಿವರದ ಗೋವಿಂದ
ಪರಮಾತ್ಮಾ ಪರಬ್ರಹ್ಮ ಪರಮಾನಂದಾ ll 3 ll
ವಾರಿಧಿ ಬಂಧನ ನೀರಜನಯನ
ವಾರಿಜೋದ್ಭವ ಪಿತ ವಸುದೇವನಂದನ ll 4 ll
ಪ್ರೇಮ ಹೆನ್ನೆವಿಟ್ಠಲಾ ಮಹಾಮಹಿಮ
ಸ್ವಾಮಿ ಪರಂಧಾಮ ಸರ್ವ ರಕ್ಷಕ ಹರಿ ll 5 ll
***