..
kruti by ಲಕ್ಷ್ಮೀನಾರಯಣರಾಯರು Lakshminarayanaru
ಆರೈದು ಸಲಹೋ ಎನ್ನ - ಶ್ರೀ ರಾಮಚಂದ್ರ ಪ
ಆರೈದು ಸಲಹೋ ಎನ್ನ ಸಾರಿದೆ ನಿನ್ನ ಚರಣ
ವಾರಿಜಯುಗಳವನ್ನು - ಶ್ರೀ ರಾಮಚಂದ್ರ ಅ.ಪ
ಕಕ್ಕಸಭವದೊಳು ದಿಕ್ಕೆಟ್ಟು ತುಕ್ಕೆ ಬಲು
ದುಃಖಿಸುತಿಹೆನು ಕೇಳು - ಶ್ರೀರಾಮಚಂದ್ರ 1
ತಂದೆ ತಾಯಿಯು ನೀನೆ ಬಂಧು ಬಳಗ ನೀನೇ
ಎಂದೆಂದು ಗತಿ ನೀನೆ - ಶ್ರೀ ರಾಮಚಂದ್ರ 2
ಕರುಣಾವಲೋಕನ ಬೀರದೆ ಭವ ಬನ್ನ ಈ
ಪರಿಯರೋಷವೊ ಘನ್ನ - ಶ್ರೀ ರಾಮಚಂದ್ರ 3
ಘೋರ ತಾಪದ ನೋವ ಪಾರಗಾಣಿಸೋ ದೇವ
ದೂರನೇ ನಾ ನಿನ್ನ - ಶ್ರೀ ರಾಮಚಂದ್ರ 4
ಯಾಕೆ ಬಾರದೋದಯ ಶ್ರೀಕಾಂತ ಎನ್ನಯ
ವಾಕುಸೋಕದೆ ಕಿವಿಯ - ಶ್ರೀರಾಮಚಂದ್ರ 5
***