Audio by Mrs. Nandini Sripad
ಶ್ರೀ ವಾದಿರಾಜರ ಕೃತಿ
ರಾಗ ಖರಹರಪ್ರಿಯ ಆದಿತಾಳ
ಜಯರಾಯ ಜಯರಾಯ ॥ ಪ ॥
ಜಯರಾಯ ನಿಮ್ಮಯ ದಯವುಳ್ಳ ಜನರಿಗೆ ।
ಜಯವಿತ್ತು ಜಗದೊಳ್ ಭಯಪರಿಹರಿಸು ॥ ಅ.ಪ ॥
ಖುಲ್ಲ ಮಾಯ್ಗಳ ಹಲ್ಲನೇ ಮುರಿದು ।
ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ ॥ 1 ॥
ಮಧ್ವರಾಯರೆಂಬೊ ಶುದ್ಧಶರಧಿಯೊಳ್ ।
ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ ॥ 2 ॥
ಸಿರಿ ಹಯವದನನ ಚರಣಕಮಲವನು ।
ಭರದಿ ಭಜಿಸುವರ ದುರಿತಗಳ್ಹರಿಸುವ ॥ 3 ॥
*******