Showing posts with label ದುರಿತ ಭಂಜನ ನರಹರಿಯೆ ಪರಿಪರಿಯಿಂದ ಸಲಹು rukmesha. Show all posts
Showing posts with label ದುರಿತ ಭಂಜನ ನರಹರಿಯೆ ಪರಿಪರಿಯಿಂದ ಸಲಹು rukmesha. Show all posts

Thursday, 5 August 2021

ದುರಿತ ಭಂಜನ ನರಹರಿಯೆ ಪರಿಪರಿಯಿಂದ ಸಲಹು ankita rukmesha

 ..

kruti by rukmangadaru

ದುರಿತಭಂಜನ ನರಹರಿಯೆ |ಪರಿಪರಿಯಿಂದ ಸಲಹು ಶ್ರೀವೈಕುಂಠ ದೊರೆಯೆ ಪ


ನಿನ್ನ ದಾಸರ ದಾಸ ನಾನು |ಎನ್ನವರು ದಾಸರ ದಾಸರಲ್ಲೇನು ||ಇನ್ನು ಒದಗದೆ ಇಹುದೇನು |ಉನ್ನತವಾದ ಬಿರುದಂಗಳ್ನಿನಗಿಲ್ಲವೇನು ? 1

ತೊತ್ತು ಮೆರಿಸಿಕೊಂಡವನಲ್ಲ |ಹೆತ್ತವರ ಭಾವಗಳನೆಲ್ಲ ಮರೆವನಲ್ಲ ||ಒತ್ತಿ ಆಪತ್ತವು ಬರಲು | ಪೊತ್ತವರಿಗೆ ಮೊರೆಯಿಡೆ ಕಡೆಗೆ ಬಿಡುವನಲ್ಲ 2

ಬರುತಿಹುದು ಸಂಕಟವೆಂದು |ಹಿರಿಯರು ನಮ್ಮನೆಲ್ಲವನು ಮರೆದರಂದು ||ಮರೆಯದೆ ರುಕ್ಮಗಿನ್ನಿದು |ಮರೆ ಮಾಡುವ ಪೀತಾಂಬರದಿಂದ ಬಂದು3

***