Showing posts with label ನೋಡಮ್ಮ ವಾರ್ಧಿಕನ್ಯೆ ಕಮಲಾಸನಾದಿಮಾನ್ಯೆ namagiri. Show all posts
Showing posts with label ನೋಡಮ್ಮ ವಾರ್ಧಿಕನ್ಯೆ ಕಮಲಾಸನಾದಿಮಾನ್ಯೆ namagiri. Show all posts

Thursday, 5 August 2021

ನೋಡಮ್ಮ ವಾರ್ಧಿಕನ್ಯೆ ಕಮಲಾಸನಾದಿಮಾನ್ಯೆ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ನೋಡಮ್ಮ ವಾರ್ಧಿಕನ್ಯೆ ಕಮಲಾಸನಾದಿಮಾನ್ಯೆ

ಸರಸಿರುಹಾಕ್ಷಿ ನಿನ್ನೆ ನಂಬಿರುವೆ ಸುಪ್ರಸನ್ನೆ ಪ


ಕಮಲಾಕ್ಷ್ಮಿ ಪೇಳೆ ನಾರೀರೊಳು ನಿನಗೆ ಸರಿಕರ್ಯಾರೆ

ದಯವಿಟ್ಟು ಮನೆಗೆ ಬಾರೆ ಮಾಡಮ್ಮ ಕನಕಧಾರೆ 1


ಕೃಪೆಯಿಟ್ಟು ಎನ್ನ ನೋಡೆ ನಿಜನೆಂಬೊ ಭಾವ ಮಾಡೆ

ಬೇಡಿದ ವರವ ನೀಡೆ ಸಿರಿ ಎನ್ನ ನೀ ಕಾಪಾಡೆ 2


ಶ್ರೀಮನ್ನøಸಿಂಹಜಾಯೆ ವರಹೇ ಮಶೋಭಿಕಾಯೆ

ನಾಮಗಿರಿ ನೀ ಬಂದು ಕಾಯೆ ಬೇಡಿಕೊಂಬೆ ತಾಯೆ 3

***