ಚರಣ ಕಮಲ ಭಜಿಸೋ ಮೈಲಾರ ಲಿಂಗನ ಪ
ಪುರಹರ ಸ್ವರೂಪನೆ ಎಂದು ಧ್ಯಾನಿಸೋ
ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀ
ಸ್ಮರಿಸೋ ಶಿರಬಾಗಿ ನಮಿಸೋ ಅ.ಪ
ತುರಗವಾಹನವೇರಿ ಬರುತಿಹನ
ಧರೆಯೊಳಗೆ ಮೈಲಾಪುರ ಸುಮಂದಿರನೆಂದು
ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ
ರ್ಚನೆಯ ಕೊಂಬುವನ ಶರಣರನ ಪೊರೆವನ 1
ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು
ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ
ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ
ಮಾಳಸಾಕಾಂತನ 2
ನಿಷ್ಠೆಯಿಂದಲಿ ಭಜಿಪ ಭಕುತರನ
ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ
ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ
ಇಷ್ಟ ಪ್ರದಾತನ3
ಸಂಚರಿಸುತಲಿ ದಿನಕರನು ಮಕರದಿ ಬರಲು
ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ
ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ
ರಾಜಿತನ ಮಹಿಮಾನ್ವಿತನ 4
ವಾರಿಜಾಸನ ವಿನುತ ಶುಭಚರಣ ಸರೋಜ ಕಾರ್ಪರ
ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ
ವಾದ್ಯ ವಿಭವದಿ ಶೇವೆ ಕೊಳುತಿಹನಾ
ಮಾರ್ತಾಂಡದೇವನ5
****