Showing posts with label ಪಂಪಾಪುರ ನಿವಾಸ ಪ್ರಮಥರೇಶಾ jagannatha vittala PAMPAAPURA NIVAASA PRAMATHARESHA. Show all posts
Showing posts with label ಪಂಪಾಪುರ ನಿವಾಸ ಪ್ರಮಥರೇಶಾ jagannatha vittala PAMPAAPURA NIVAASA PRAMATHARESHA. Show all posts

Saturday, 14 December 2019

ಪಂಪಾಪುರ ನಿವಾಸ ಪ್ರಮಥರೇಶಾ ankita jagannatha vittala PAMPAAPURA NIVAASA PRAMATHARESHA


ಜಗನ್ನಾಥದಾಸರು
ಪಂಪಾಪುರ ನಿವಾಸ ಪ್ರಮಥರೇಶಾ ಪ

ತ್ವಂ ಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ಅ.ಪ.

ಕೈಲಾಸಸದ್ಮ ಚಿತಿಚೇಲ ಭೂಷಣ ಮನೋ
ಮೈಲಿಗೆಯ ಪರಿಹರಿಸೊ ನೀಲಕಂಠ
ಕಾಲ ಕಾಲಗಳಲ್ಲಿ ಕಾಲನಿಯಾಮಕನ
ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ 1

ಪಾರ್ವತೀರಮಣ ನೀ ಮೋಹಶಾಸ್ತ್ರವ ರಚಿಸಿ
ಶಾರ್ವರೀಚರರ ಮೋಹಿಸಿದೆ ಹಿಂದೆ
ಶುಕ ವ್ಯಾಧ ಜೈಗೀಷ ರೂಪದಲಿ
ಈರ್ವಗೆ ಚರಿಯದಲಿ ಹರಿಯ ಮೆಚ್ಚಿಸಿದೆ 2

ಸುರನದೀಧರ ನಿನ್ನ ಚರಿತೆಗಳ ವರ್ಣಿಸಲು
ಸುರಪಮುಖ ಸುಮನಸಾದ್ಯರಿಗಸದಳಾ
ಸ್ಮರನಪಿತ ಶ್ರೀ ಜಗನ್ನಾಥ ವಿಠ್ಠಲನ ಸಂ
ಸ್ಮರಣೆಯನು ಕೊಟ್ಟು ಉದ್ಧರಿಸು ದಯದಿಂದ 3
********