Showing posts with label ಮಗುವು ಕಾಣಿರಯ್ಯ ಮಾಯದ ಮಗುವು ಕಾಣಿರಯ್ಯ neleyadikeshava. Show all posts
Showing posts with label ಮಗುವು ಕಾಣಿರಯ್ಯ ಮಾಯದ ಮಗುವು ಕಾಣಿರಯ್ಯ neleyadikeshava. Show all posts

Wednesday, 1 September 2021

ಮಗುವು ಕಾಣಿರಯ್ಯ ಮಾಯದ ಮಗುವು ಕಾಣಿರಯ್ಯ ankita neleyadikeshava

 ..

ಮಗುವು ಕಾಣಿರಯ್ಯ | ಮಾಯದ | ಮಗುವು ಕಾಣಿರಯ್ಯ ಪ


ಸುಗುಣ ವಾದಿರಾಜರೆ ಮೂಜಗವನು ತನ್ನುದರದೊಳಿಟ್ಟಅ


ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನಸಾಯಬಡಿದು ಧೇನುಕನ ವೃಷಭಾಸುರನನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ1


ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿಶ್ರೀಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟುಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ2


ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆಕಡಲಿಗಟ್ಟಿ ಬಂದು ತಾಯ ತೊಡೆಯ ಮೇಲೆ ಮಲಗಿದಂಥ 3


ಕಲ್ಲಿಗಟ್ಟಿ ಗೂಡೆಯಲಿ ಗೋಲಿಯ ಚೀಲವನಿಕ್ಕಿಹಿಲ್ಲಿ ಕಟ್ಟೋಗರ ಕಡಕಲಕ್ಕಳೆಯಾ ತುದಿಯಲಿನಿಲ್ಲಿಸಿ ಪೆಗಲೊಳು ಕೊಂಬು ಕೋಲನೆ ಪಿಡಿದುಗೊಲ್ಲರೊಡಗೂಡಿ ನಮ್ಮೆಲ್ಲರ ಗೋವುಗಳ ಕಾಯ್ದ 4


ಶ್ರುತಿತತಿಗೆ ಗೋಚರಿಸುವ ಅಚ್ಯುತನು ಭುವನಾದಿಮೂರ್ತಿರತಿಪತಿ ಪಿತನು ಶೇಷಾದ್ಯಾರಾಧ್ಯನುಕ್ಷಿತಿಗಧಿಕ ವೇಲಾಪುರದ ಪತಿ ವೈಕುಂಠ ಕೇಶವನುಯತಿಯೆ ನೀ ನೋಡಯ್ಯ ಶರಣಾಗತನ ತೊಡೆಯಿಂ ಮಾಯವಾದ 5

***