Showing posts with label ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನು indiresha. Show all posts
Showing posts with label ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನು indiresha. Show all posts

Monday, 2 August 2021

ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನು ankita indiresha

ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನುರುಕ್ಮಾಭರಣ ವಿಲಕ್ಷಣ ಶೋಭಿಪ ಸುಲಕ್ಷಣ ಮೂರ್ತಿಯನುರಕ್ಕಸರಿಪು ಬಲಪಕ್ಕದಿ ಕೂತಿಹ ರುಕ್ಮಿಣಿ ದೇವಿಯನು ಪ


ಸಂತತ ಭಜಿಸುವ ಸಂತರ ಹತ್ತಿರ ನಿಂತು ರಕ್ಷಿಸುತಿಹಳುಶಾಂತಳು ಸದ್ಗುಣವಂತಳು ಕಮಲಾಕಾಂತನ ಸುಪ್ರಿಯಳೂ ಕರವೀರಪ್ರಾಂತ್ಯದೊಳಿರುತಿಹಳು ಹೃತ್ಕಮಲಂಚಳ ಸಂಸ್ಥಿತಳು 1

ಸೀತೆಯ ತ್ರಿಜಗನ್ಮಾತೆಯ ಕ್ಷೀರದಿ ಜಾತೆಯು ಪರಮಾ ಶ್ರೀಧಾತೆಯು ಮಾಧವ ಭೂಮಿಯ ಮಂಗಳ ಮೂರ್ತಿಯು ಸುಖರಾಶಿ2

ಆಸ್ಯಾಂಬುಜತನು ಹಾಸಸುಕುಂತಳೆ ಭೂಷಿತ ಬಿಂಬೋಷ್ಠೀಕೂಸಿಗೆ ಕೊಡು ಇಂದಿರೇಶನ ಸಹಜಗದೀಶಳೆ ತವ ಭೆಟ್ಟಿ3

ಸಗರನಾತ್ಮಜರಿಗೆ ಮೋಕ್ಷವ ಕೊಟ್ಟೆ ನರಶಿರವನು ಮೆಟ್ಟಿಸುಗುಣ ತದ್ಭಸ್ಮವನೆ ನೀ ಮುಟ್ಟಿ ಅಗಣಿತ ಮಹಿಮನಸುಗುಣದೊಳಾಡುವ ಮಿಗೆ ಹರುಷವ ಕೊಡುನಗೆಮುಖದವಳೇ 4

ಸಂದರವದನೆ ಸಿಂಧುರಗಮನೆ ಕುಂದದ ಅಸುರರನೆಮಂದರಮಾಲಾ ಭೂಷಿತವೇಣಿ ಇಂದಿರೇಶನ ಪಾದದ್ವಂದ್ವತೋರಿಸು ನಿನಗೊಂದಿಸುವೆನು ಶರದಿಂದು ಸುಮನಸೆ 5

****