Showing posts with label ನೋಡಿ ಧನ್ಯನಾದೆ ಸತ್ಯಬೋಧರಾಯಾ hanumesha vittala satyabodha teertha stutih. Show all posts
Showing posts with label ನೋಡಿ ಧನ್ಯನಾದೆ ಸತ್ಯಬೋಧರಾಯಾ hanumesha vittala satyabodha teertha stutih. Show all posts

Thursday, 26 December 2019

ನೋಡಿ ಧನ್ಯನಾದೆ ಸತ್ಯಬೋಧರಾಯಾ ankita hanumesha vittala satyabodha teertha stutih

ನೋಡಿ ಧನ್ಯನಾದೆ ಸತ್ಯಬೋಧರಾಯಾ
ಬೇಡಿದೊರುವ [ಬೇಡಿದ ವರವ] ನೀಡುವ ಪರಮದಯಾಕರನಾ ||ಪ

ರಘುರಾಮನ ಸೇವೆಯನ್ನು ಮಾಡ್ದ ಮಹಿಮನಾ
ಪೊಗಳಿ ಪಾಡುವರಿಗೆ ಮುಕ್ತಿ ಪಥವ ತೋರ್ವನಾ 1

ವಿಷವ ಮೆದ್ದು ಹರಿಕೃಪೆಯಿಂ ಜೀರ್ಣಿಸಿದವನಾ
ಆಶೀರ್ವದಿಸಿ ಖಂಡೆರಾಯನುದ್ಧರಿಸಿದವನಾ 2

ವರಭೂಸುರರಾಡಿದ ನಿಂದೆಯನು ನುಡಿಯನಾ
ತ್ವರದಿ ಕೇಳಿ ತೋರಿದನು ಇವನು ಸೂರ್ಯನಾ 3

ಕೊಡು ಭಕುತಿಯನು ನಿನ್ನೊಳು ಗುರುಸತ್ಯಬೋಧನೆ
ಬಿಡಿಸೊ ನಿನ್ನ ಅಡಿಗೆ ಕಟ್ಟಿಕೊಳೈ ಕೊರಳನೆ 4

ಹರಿವಾಯುಗಳಲಿ ಕೊಡು ನೀ ನಿಜ ಭಕುತಿಯನೆ
ವರದ ಶ್ರೀ ಹನುಮೇಶವಿಠಲನಡಿ ಸೇವಕನೇ 5
**********