Showing posts with label ಗುರುವಿಗೆ ನಮಿಸುವೆನು ಸಲಹುವ gurumahipati. Show all posts
Showing posts with label ಗುರುವಿಗೆ ನಮಿಸುವೆನು ಸಲಹುವ gurumahipati. Show all posts

Wednesday, 1 September 2021

ಗುರುವಿಗೆ ನಮಿಸುವೆನು ಸಲಹುವ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಗುರುವಿಗೆ ನಮಿಸುವೆನು | ಸಲಹುವ ಪ 

ಭಕ್ತಿಯ ಒಲಿಸೀ | ವಿರಕ್ತಿಯ ಬೆಳೆಸೀ | ಮುಕ್ತಿಗೆ ನಲಿಸೀ | ಯುಕಿಗಳನೇ ಕಳಿಸಿ 1 

ಅವಿದ್ಯ ಬಿಡಿಸಿ | ಸುವಿದ್ಯೆವಿಡಿಸಿ | ಭವ ಭಯಗಡಿಸಿ | ವಿವೇಕ ವಡಗೂಡಿಸೀ 2 

ಗುರು ಮಹಿಪತಿ | ಶರಣರ ಸಾರ್ಥಿ | ತರಳಗ ಸ್ಫೂರ್ತಿ | ಕರುಣಿಸಿ ಘನಮತಿ 3

****