Showing posts with label ಗಂಡ ಬಂದರೇನೆಲೋ ರಂಗಾ ಯನ್ನ ಗಂಡ ಬಂದರೇನೆಲೋ ರಂಗ shreeda vittala. Show all posts
Showing posts with label ಗಂಡ ಬಂದರೇನೆಲೋ ರಂಗಾ ಯನ್ನ ಗಂಡ ಬಂದರೇನೆಲೋ ರಂಗ shreeda vittala. Show all posts

Sunday, 1 August 2021

ಗಂಡ ಬಂದರೇನೆಲೋ ರಂಗಾ ಯನ್ನ ಗಂಡ ಬಂದರೇನೆಲೋ ರಂಗ ankita shreeda vittala

..

kruti by Srida Vittala Dasaru  Karjagi Dasappa


ಗಂಡ ಬಂದರೇನೆಲೋ ರಂಗಾ ಯನ್ನ

ಗಂಡ ಬಂದರೇನೆಲೋ ರಂಗ ಪ


ಕಂಡರೆ ಒಗೆತನ ಭಂಗಾ ಯನ ಗಂಡ ಅ.ಪ.


ಬಾಗಿಲ ತೆಗೆಯೆಂದಾರ್ಭಟದಿಂದಲಿ

ಕೂಗುವ ಧ್ವನಿ ಕೇಳೈ ಇದಕೋ

ಹ್ಯಾಗೆ ಮಾಡಲಿ ಹಾದಿಯ ಮನೆ ಯೆನ -

ಗಾಗದವರು ಬಂದೀಗ ನಗುವರೆನ್ನ1


ನಂದಗೋಕುಲದಿ ನಾನೇ ಗರತಿ -

ಯೆಂದು ಮೆರೆಯುತ್ತರಲೀಗ

ಬಂಧು ಬಳಗದೊಳು ಬಂಡಳಾಗಿಯೆಂ-

ದೆಂದಿಗೂ ತಲೆಯೆತ್ತಿ ತಿರುಗದಂತೆ ಯನ್ನ 2


ದಕ್ಕಲಿಲ್ಲ ಮನದೊಳಗೆ ಮಾಡಿಕೊಂ -

ಡಕ್ಕರ ತೀರಲಿಲ್ಲ ಮುನ್ನಾ

ಗಕ್ಕನೆ ಗೋವಳ ಬರಬಹುದೆ ಖಳ

ಸಿಕ್ಕಿದೇವÀಲ್ಲವೊ ಶ್ರೀದವಿಠಲ ಯನ್ನ 3

***