Audio by Mrs. Nandini Sripad
ಶ್ರೀದಿಗ್ವಿಜಯ ರಾಮದೇವರ ಸುಳಾದಿ
ರಾಗ ಆನಂದಭೈರವಿ
ಧ್ರುವತಾಳ
ವಂದೆ ಮುಕುಂದ ಮುಚಕುಂದ ಪರಿಪಾಲಕ
ಕುಂದೇಂದು ವದನ ಆನಂದಮೂರ್ತಿ
ಗಂಧದೋಷ ದೂರವಾಗಿದ್ದ ಚಿತ್ ಪ್ರಕೃತಿ
ಯಿಂದ ನೋಡೆ ಚತುರ್ವಿಧ ದೋಷದೂರಾ
ವಂದೆ ಮುಕುಂದ ನಮೋ ವೃಂದಾರಕ ಮುನಿ
ವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾ
ಮಂದಹಾಸ ಮಂದಾಕಿನಿಜನಕ ಸುಂದರಿನಾಥ ಗೋ -
ವಿಂದ ಇಂದೀವರದಳ ಶಾಮಲಾ
ಕಂದರ್ಪ ಕೋಟಿಲಾವಣ್ಯ ತಾರುಣ್ಯ ಸದಾ -
ಮಂದಿರಾ ವೈಕುಂಠ ವೈನತೇಯಾ
ಶ್ಯಂದನ ಸ್ಕಂದ ಸನಂದನ ಪ್ರಿಯ ಪು -
ರಂದರ ನಂದನ್ನ ಮಾನಭಂಗ
ಇಂಧನಭೋಕ್ತನೇತ್ರಾ ಒಂದೊಂದು ಒಂದಾರು ಮ್ಯಾಲೊಂದು
ಕಂಧರನಗೋಸುಗ ಅಹಮತಿಯಲ್ಲಿ
ಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅ -
ರಿಂದ ಯಮ ದಮ ಶಾಂತ ಪೂರ್ಣ ಪೂರ್ಣಾ
ವಂದೆ ಮುಕುಂದ ನಮೋ ನಂದಗೋಕುಲ -
ಪಾವನ್ನ ವಿಜಯವಿಠ್ಠಲ ರಾಮಚಂದ್ರ
ಪಾಪ ಪರ್ವತಕೆ ಇಂದ್ರಾಯುಧವೆಂದೆನಿಪ ॥ 1 ॥
ಮಟ್ಟತಾಳ
ಮಂಗಳಾಂಗಿ ರಮಣ ರಂಗ ರಂಗೋರಂಗ -
ಪುಂಗವ ಪರಿಯಂಕ ಸಂಗ ಸಂಗೀತಲೋಲ
ಅಂಗ ವಿಚಿತ್ರಾಂಗ ತುಂಗ ಮಾತಂಗ ರಿಪು
ಭಂಗ ರಾಜಸಿಂಗ ಭಂಗರಹಿತ ಸ -
ರ್ವಾಂಗ ರೋಮ ಪ್ಲವಂಗ ಕಟಕನಾಯಕ
ಇಂಗಿತ ಜನರಂತರಂಗ ಕರುಣಾಪಾಂಗ
ರಂಗು ಮಾಣಿಕ ಭೂಷಾ ಶೃಂಗಾರಾಂಗ ಮಾರ್ಗಣ
ಶಿಂಗಾಡಿ ಹಸ್ತವಂಗುಳಿ ಚಾತುರ್ಯ
ಗಂಗಾಧರ ಚಾಪಭಂಗ ಭಕ್ತವತ್ಸಲ ರಂಗ ರಂಗರಾಮ
ಮಂಗಳಾಂಗ ದೇವೋತ್ತುಂಗ ವಿಜಯವಿಠ್ಠಲ
ಜಂಗಮ ಸ್ಥಾವರ ಜಂಗುಳಿ ಜಡಭಿನ್ನಾ ॥ 2 ॥
ತ್ರಿವಿಡಿತಾಳ
ಇಂದ್ರಗೋಪದಂತೆ ವರ್ಣದಿಂದೊಪ್ಪುವ
ಅಂದವಾದ ದಿಗ್ವಿಜಯರಾಮ -
ಚಂದ್ರ ಭಕ್ತ ಚಕೋರ ಮಾನವ ಮನುಜ ಲೀಲಾ
ಸಂದರುಶನ ಮಾತ್ರದಿಂದ ಲಾಭಾ -
ಸಂದೋಹ ಕೊಡುವನೆ ಕ್ಷತ್ರಕುಲೋತ್ತಮ
ಶ್ಯಂದನಹತ್ತು ನಾಮಕ ನಂದನಾ
ಇಂದೆನ್ನ ಹೃದಯಾಬ್ಜ ಮಂದಿರದಲಿ ಬಂದು
ನಿಂದಾಡುವ ದಾಶರಥಿಯೆ ತಂದೆ
ತಂದೆ ತಂದೆ ತಂದೆ ಈ ಪರಿ ಎನ್ನಾ -
ನಂದವಾದ ಮನಕೆ ನಿನ್ನ ಮೂರ್ತಿ
ಪೊಂದಿಸು ಭುವನ ಪಾವನವಾದ ಚರಣಾರ -
ವಿಂದ ಪಾಂಸ ಲೇಶ ಧರಿಪಾರಲ್ಲಿ
ಬಂದು ಕಾರುಣ್ಯಸಿಂಧು ನಿನ್ನಂಘ್ರಿ ನಖಚಂದ್ರ -
ಚಂದ್ರಿಕೆಯಲಿ ಎನ್ನ ಹೃತ್ತಾಪವ
ನಂದಿಸು ನಾನಾವತಾರ ನಾರಾಯಣಾ
ಮಂದರೋದ್ಧರನೇ ಮಹಾಮಹಿಮಾ
ಸಂದೇಹ ಎನಗಿಲ್ಲ ನಿನ್ನ ಕಂಡ ಮೇಲೆ
ಬಿಂದು ಮಾತುರ ಕ್ಲೇಶ ಎನಗಿಪ್ಪದೇ
ಕೊಂದು ಬಿಸುಟುವೆನು ಖಳರ ಉಪದ್ರವ
ಕಂದ ನಾನೆನಲೋ ನಿನಗೆ ಜನುಮ ಜನುಮ
ಎಂದೆಂದಿಗೆ ಎನ್ನ ಸಾಧನದಿಂದಲಿ ಆ -
ನಂದ ಕೊಡುವೆನೆಂಬೊ ಕೀರ್ತಿಯುಂಟೇ
ಬಂದು ಸೇರಿದ ಭೂತ ಪ್ರೇತಾದಿಗಳು ಮಂತ್ರ -
ದಿಂದಲಿ ಅನ್ನಪಾನಾದಿಗಳು ತಂದು ಇತ್ತದ -
ರಿಂದ ವಶವಾಗಿ ಒಡನೊಡನೆ
ಹಿಂದೆ ತಿರುಗುತಿಪ್ಪವು ತ್ರಾಣಗೆಟ್ಟು
ವಂದಿಪೆ ಅದರಂತೆ ನಿನಗಲ್ಲವೊ ಎಳೆ -
ಗಂದಿಯೋ ಸಂತತ ಅನುಕಂಪನೆ
ಅಂದ ಜನಕೆ ಪ್ರಾಣ ನಿಜಸ್ವಭಾವ ಉ -
ಪೇಂದ್ರ ವಿಜಯವಿಠ್ಠಲ ರಾಮ ರಘುಕುಲ ತಿಲಕಾ ॥ 3 ॥
ಅಟ್ಟತಾಳ
ಜಡ ಚೇತನದೊಳು ವ್ಯಾಪ್ತವಾಗಿಪ್ಪನೆ
ಧೃಢ ಭಕ್ತರಿಗೆ ತತ್ತದಾಕಾರ ರೂಪನಾಗಿ
ಬಿಡದೆ ಕಾಣಿಸಿಕೊಂಬದೇನು ಸೋಜಿಗವೆ
ಬಡವ ಭಾಗ್ಯವಂತ ಎಂಬೊ ವಾರ್ತೆಯಲ್ಲಿ
ಅಡಿಗಡಿಗೆ ಕೇಳು ಇದರ ವಿಚಿತ್ರದ
ನುಡಿ ಬೇರೆ ನಡೆ ಬೇರೆ ಪಾರಾವಾರ ಮೂರ್ತಿಯೆ
ಸಡಗರ ಏನೆಂಬೆ ಯೋಗ್ಯತಾನುಸಾರ
ಕೊಡುವನು ಜ್ಞಾನ ಭಕುತಿ ವೈರಾಗ್ಯವ
ಎಡಿಗಡಿಗೆ ತನ್ನ ಧ್ಯಾನವ ಪಾಲಿಸೀ
ಪೊಡವಿ ವಿಬುಧರೆಲ್ಲ ಮತ್ಸರ ದುರ್ಗವ
ಕಡಿದು ಮನೋರಥ ಪಡಕೊಂಡು ಸುಖಿಪರು
ಕಡಲಶಯನ ನಮ್ಮ ವಿಜಯವಿಠ್ಠಲರೇಯಾ
ಅಡಿಗಳರ್ಚಿಪರ ಚಿತ್ತದಲ್ಲಿ ನೆಲಸಿಪ್ಪ ॥ 4 ॥
ಆದಿತಾಳ
ಆನಂದ ಜ್ಞಾನಪ್ರದ ಶ್ರೀನಾಥನ ದಕ್ಷಿಣ ವಾಮಾಂಘ್ರಿ
ಆನಂದಪಾದ ಆನಂದಪ್ರದ
ವಾನರಕಾಂತ ಲಕ್ಷ್ಮಣ ಸುಗ್ರೀವ
ದಾನವನಿಂದಲಿ ಪೂಜೆಗೊಂಬ ಪಾದ
ರಾಜಿಸುವ ಪಾದ ದೀನ ಮಾನವರಿಗೆ
ಒಲಿದೊಲಿದು ನಿತ್ಯ ಧ್ಯಾನಪ್ರದ ಪಾದ
ಮಾನಪ್ರದ ಪಾದ ಶ್ರೀನಾರಿ ಕರಕಮಲ ಪೂಜಿತ
ಸರ್ವಾಂಕಿತ ಪಾದ ಭವತಾರಕ ಪಾದ
ಏನೇನು ಬೇಡಿದಭೀಷ್ಟೆಯ ಕೊಡುವದು
ಒಳಗೆ ಪೊಳೆವ ಪಾದ ಹೊರಗೆ ತೋರುವ ಪಾದ
ಆನಂದತೀರ್ಥರ ಮನದಲ್ಲಿ ನಿಂದ
ಅತಿನಿರ್ಮಳ ಪಾದ ಅಪಾಕೃತ ಪಾದ
ದಾನಿಗಳರಸ ವಿಜಯವಿಠ್ಠಲ ಕಾಮ -
ಧೇನು ರಾಮ ಕೌಸಲ್ಯ ತನಯನ ಪಾದ ॥ 5 ॥
ಜತೆ
ವಸುಧೇಂದ್ರ ಮುನಿಯಿಂದ ನಾನಾ ಪೂಜೆಯಗೊಂಡು
ವಸುಧಿಯೊಳಗೆ ಮೆರೆವ ವಿಜಯವಿಠ್ಠಲ ರಾಮಾ ॥
************
ರಾಮ ದೇವರ ಸುಳಾದಿ
VANDE MUKUNDA suladi RAAMA DEVA SULADI
ಧೃವತಾಳ-
ಧೃವತಾಳ-
ವಂದೆ ಮುಕುಂದ ಮುಚುಕುಂದ ಪರಿಪಾಲಕ|
ಕುಂದೇಂದು ವದನ ಆನಂದ ಮೂರ್ತಿ|
ಗಂಧ ದೋಷ ದೂರವಾಗಿದ್ದ ಚಿತ್ ಪ್ರಕೃತಿ|
ಯಿಂದ ನೋಡೆ ಚತುರ್ವಿಧ ದೋಷ ದೂರಾ|
ವಂದೇ ಮುಕುಂದ ನಮೋ ವೃಂದಾರಕ ಮುನಿ|
ವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾ|
ಮಂದಹಾಸ ಮಂದಾಕಿನಿ ಜನಕ|
ಸುಂದರೀನಾಥ ಗೋವಿಂದ ಇಂದೀವರದಳ ಶ್ಯಾಮ|
ಕಂದರ್ಪ ಕೋಟಿ ಲಾವಣ್ಯ ತಾರುಣ್ಯ ಸದ|
ಮಂದಿರಾ ವೈಕುಂಠ ವೈನತೇಯಾ ಶ್ಯಂದನ|
ಸ್ಕಂದ ಸನಂದನಪ್ರಿಯ ಪುರಂದರ ನಂದನ್ನ ಮಾನಭಂಗ|
ಇಂಧನಭೋಕ್ತಾ ನೇತ್ರ ಒಂದೊಂದು|
ಒಂದಾರು ಮೇಲೋಂದು ಕಂಧರನ ಗೋಸುಗ ಅಹಮತಿಯಲ್ಲಿ|
ಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅ|
ರಿಂದರು ದಮ ಶಾಂತ ಪೂರ್ಣಾಪೂರ್ಣಾ|
ವಂದೆ ಮುಕುಂದ ನಮೊ|
ನಂದ ಗೋಕುಲ ಪಾವನ್ನ ವಿಜಯವಿಟ್ಠಲ ರಾಮ|
ಚಂದ್ರ ಪಾಪ ಪರ್ವತಕ್ಕೆ ಇಂದ್ರಾಯುಧವೆಂದೆನಿಪ||೧||
-ಮಟ್ಟತಾಳ-
ಮಂಗಳಾಂಗಿ ರಮಣ ರಂಗ ರಂಗೋರಂಗ|
ಪುಂಗವ ಪರಿಯಂಕ ಸಂಗ ಸಂಗೀತಲೋಲ|
ಅಂಗ ವಿಚಿತ್ರಾಂಗ ತುಂಗ ಮಾತಂಗರಿಪು-|
ಭಂಗ ರಾಜಸಿಂಗ ಭಂಗರಹಿತ ಸರ್ವಾಂಗ ರೋಮ ಪ್ಲ-|
ವಂಗ ಕಟಕನಾಯಕ ಇಂಗಿತ ಜನರಂತ-|
ರಂಗ ಕರುಣಾಪಾಂಗ ರಂಗುಮಾಣಿಕ ಭೂಷಾ|
ಶೃಂಗಾರಾಂಗ ಮಾರ್ಗಣ ಶಿಂಗಾಡಿ ಹಸ್ತ|
ವಂಗುಳಿ ಚಾತುರ್ಯ ಗಂಗಾಧರ ಚಾಪ-|
ಭಂಗ ಭಕ್ತವತ್ಸಲ ರಂಗ ರಂಗರಾಮ|
ಮಂಗಳಾಂಗ ದೇವೋತ್ತುಂಗ ವಿಜಯವಿಟ್ಠಲ|
ಜಂಗಮ ಸ್ಥಾವರ ಜಂಗುಳಿ ಜಡ ಭಿನ್ನಾ||೨||
-ತ್ರಿವಿಡಿತಾಳ-
ಇಂದ್ರಗೋಪದಂತೆ ವರ್ನದಿಂದೊಪ್ಪುವ|
ಅಂದವಾದ ದಿಗ್ವಿಜಯ ರಾಮಾ|
ಚಂದ್ರ ಭಕ್ತ ಚಕೋರ ಮಾನವ ಮನುಜ ಲೀಲಾ|
ಸಂದರುಶನ ಮಾತ್ರದಿಂದ ಲಾಭಾ|
ಸಂದೋಹ ಕೊಡುವನೆ ಕ್ಷಾತ್ರ ಕುಲೋತ್ತಮ|
ಶ್ಯಂದನ ಹತ್ತು ನಾಮಕ ನಂದನಾ|
ಇಂದೆನ್ನ ಹೃದಯಾಬ್ಜ ಮಂದಿರದಲಿ ಬಂದು|
ನಿಂದಾಡುವ ದಾಶರಥಿಯೆ ತಂದೆ ತಂದೆ ತಂದೆ|
ತಂದೆ ಈ ಪರಿ ಎನ್ನ ನಂದವಾದ ಮನಕೆ ನಿನ್ನ ಮೂರ್ತಿ|
ಪೊಂದಿಸು ಭುವನ ಪಾವನವಾದ ಚರಣಾರ|
ವಿಂದ ಪಾಂಶ ಲೇಶ ಧರಿಪಾರಲ್ಲಿ|
ಬಂದು ಕಾರುಣ್ಯಸಿಂಧು ನಿನ್ನಂಘ್ರಿ ನಖಚಂದ್ರ|
ಚಂದ್ರಿಕೆಯಲಿ ಎನ್ನ ಹೃತ್ತಾಪವ|
ನೊಂದಿಸು ನಾನಾವತಾರ ನಾರಾಯಣಾ|
ಮಂಧರೋದ್ಧರನೇ ಮಹಾ ಮಹಿಮಾ|
ಸಂದೇಹ ಎನಗಿಲ್ಲ ನಿನ್ನ ಕಂಡಮೇಲೆ|
ಬಿಂದು ಮಾತುರ ಕ್ಲೇಶ ಎನಗಿಪ್ಪುದೇ|
ಕೊಂದು ಬಿಸುಟುವೆನು ಖಳರ ಉಪದ್ರವ|
ಕಂದನಾನೆಲೋ ನಿನಗೆ ಜನುಮ ಜನುಮ|
ಎಂದೆಂದಿಗೆ ಎನ್ನ ಸಾಧನದಿಂದಲಿ ಆ-|
ನಂದ ಕೊಡುವೆನೆಂಬೊ ಕೀರ್ತಿಯುಂಟೇ|
ಬಂದು ಸೇರಿದ ಭೂತ ಪ್ರೇತಾದಿಗಳು ಮಂತ್ರ|
ದಿಂದಲಿ ಅನ್ನಪಾನಾದಿಗಳು ತಂದು ಇತ್ತದ-|
ರಿಂದ ವಶವಾಗಿ ಒಡನೊಡನೇ|
ಹಿಂದೆ ತಿರುಗುತಿಪ್ಪವು ತ್ರಾಣಗೆಟ್ಟು|
ವಂದಿಪೆ ಅದರಂತೆ ನಿನಗಲ್ಲವೊ ಎಳೆ|
ಗಂದಿಯೋ ಸಂತತ ಅನುಕಂಪನೆ|
ಅಂದ ಜನಕೆ ಪ್ರಾಣ ನಿಜ ಸ್ವಭಾವ ಉ-|
ಪೇಂದ್ರ ವಿಜಯವಿಟ್ಠಲ ರಾಮ ರಘುಕುಲತಿಲಕಾ||೩||
-ಅಟ್ಟತಾಳ-
ಜಡ ಚೇತನದೊಳು ವ್ಯಾಪ್ತವಾಗಿಪ್ಪನೆ|
ದೃಢ ಭಕ್ತರಿಗೆ ತತ್ತದಾಕಾರ ರೂಪನಾಗಿ|
ಬಿಡದೆ ಕಾಣಿಸಿಕೊಂಬದೇನು ಸೋಜಿಗವೊ|
ಬಡವ ಭಾಗ್ಯವಂತ ಎಂಬೊ ವಾರ್ತೆಯಲ್ಲಿ|
ಅಡಿಗಡಿಗೆ ಕೇಳು ಇದರ ವಿಚಿತ್ರದ|
ನುಡಿ ಬೇರೆ ನಡೆ ಬೇರೆ ಪಾರಾವಾರ ಮೂರ್ತಿಯೆ|
ಸಡಗರ ಏನೆಂಬೆ ಯೋಗ್ಯತಾನುಸಾರ|
ಕೊಡುವನು ಜ್ಞಾನ ಭಕುತಿ ವೈರಾಗ್ಯವ|
ಅಡಿಗಡಿಗೆ ತನ್ನ ಧ್ಯಾನವ ಪಾಲಿಸೀ|
ಪೊಡವಿ ವಿಬುಧರೆಲ್ಲ ಮತ್ಸರ ದುರ್ಗವ|
ಕಡಿದು ಮನೋರಥ ಪಡಕೊಂಡು ಸುಖಿಪುದು|
ಕಡಲಶಯನ ನಮ್ಮ ವಿಜಯವಿಟ್ಟಲರೇಯಾ|
ಅಡಿಗಳರ್ಚಿಪರ ಚಿತ್ತದಲಿ ನೆಲೆಸಿಪ್ಪ||೪||
-ಆದಿತಾಳ-
ಆನಂದ ಜ್ಞಾನಪ್ರದ| ಶ್ರೀನಾಥನ ದಕ್ಷಿಣವಾಮಾಂಘ್ರಿ|
ಆನಂದ ಪಾದ ಆನಂದಪ್ರದ| ವಾನರಕಾಂತ ಲಕ್ಷ್ಮಣ ಸುಗ್ರೀವ|
ದಾನವನಿಂದಲಿ ಪೂಜೆಕೊಂಬ ಪಾದ ರಾಜಿಸುವ ಪಾದ|
ದೀನ ಮಾನವರಿಗೆ ಒಲಿದೊಲಿದು ನಿತ್ಯ ಧ್ಯಾನಪ್ರದ ಪಾದ|
ಮಾನಪ್ರದ ಪಾದ| ಶ್ರೀನಾರಿಕರಕಮಲ ಪೂಜಿತ
ಸರ್ವಾಂಕಿತ ಪಾದ ಭವತಾರಕ ಪಾದ|
ಏನೇನು ಬೇಡಿದಭೀಷ್ಟೆಯ ಕೊಡುವುದು|
ಒಳಗೆ ಪೊಳೆವ ಪಾದ ಹೊರಗೆ ತೋರುವ ಪಾದ|
ಆನಂದತೀರ್ಥರ ಮನದಲ್ಲಿ ನಿಂದ ಅ|
ತಿ ನಿರ್ಮಲ ಪಾದ ಅಪ್ರಾಕೃತ ಪಾದಾ|
ದಾನಿಗಳರಸ ವಿಜಯವಿಟ್ಠಲ ಕಾಮ-|
ಧೇನು ರಾಮ ರಾಮ ಕೌಸಲ್ಯತನಯನ ಪಾದ||೫||
-ಜತೆ-
ವಸುಧೇಂದ್ರಮುನಿಯಿಂದ ನಾನಾಪೂಜೆಯಗೊಂಡು|
ವಸುಧೆಯೊಳಗೆ ಮೆರೆವ ವಿಜಯವಿಟ್ಠಲ ರಾಮಾ||೬||
***********