ವರವ ಕೊಡೆ ತಾಯಿ ವರವ ಕೊಡೆ ತಾಯಿ ವರವ ಕೊಡೆ
ಶರಧಿ ಸಂಪನ್ನೆ ಕೇಳಿ ಸೆರಗೊಡ್ಡಿ ಬೇಡುವಂಥಾ || pa ||
ಬಾಗಿಲು ತೋರಣ ಕಟ್ಟಿ ಮದುವೆ ಮುಂಜಿ ನಾಮಕರಣ | ಅನುಗಾಲ ಇರುವಂಥ ವರವ ಕೊಡೆ || 1 ||
ಮಾಡಿಯ ಮನೆಯೊಳಗೇ ಜೋಡು ತೊಟ್ಟಿಲ ಕಟ್ಟಿ ಜೋಗುಳ ಹಾಡುವಂಥ ವರವ ಕೊಡೆ || 2 ||
ಅಷ್ಟೈಶ್ವರ್ಯ ಸೌಭಾಗ್ಯ ಅನುಗಾಲ ಇರುವಂಥ ವರವ ಕೊಡೆ ತಾಯೆ ವರವ ಕೊಡೆ || 3 ||
ಕಟ್ಟಿದ ಮಾಂಗಲ್ಯ ಕರಿಯ ಮಣಿಸರ ಸ್ಥಿರವಾಗೇ ಇರುವಂಥ ವರವ ಕೊಡೆ || 4 ||
ಹೆಣ್ಣು ಮಕ್ಕಳ ಹಡೆದು ಹೊನ್ನು ಸೆರಗಿಲಿ ಕಟ್ಟಿ | ಕನ್ಯಾದಾನ ಮಾಡುವಂಥ ವರವ ಕೊಡೆ || 5 ||
ಗಂಡು ಮಕ್ಕಳ ಹಡೆದು ಕುಲವನ್ನುದ್ಧರಿಸುವ | ಬಿಂದುಲಿ ಇಡುವಂಥ ಮಗನ ಕೊಡೆ || 6 ||
ಶ್ಯಾಲ್ಲನ ಸುಘೃತ ಪಂಚ ಭಕ್ಷ್ಯ ಪರಮಾನ್ನ ನೈವೇದ್ಯ ಇಡುವಂಥ ವರವ ಕೊಡೆ || 7 ||
ಅನ್ನ ದಾನ ವಸ್ತ್ರ ದಾನ ಗೃಹ ದಾನ ಭೂ ದಾನ | ಗೋದಾನ ಕೊಡುವಂಥ ವರವ ಕೊಡೆ || 8 ||
ರಂಗ ನಾಯಕಿ ನಿನ್ನ ಮುಡಿಯ ಮೇಲಿರುವಂಥ| ಪ್ರಸನ್ನವೆಂಕಟನಾರಸಿ ಹೂವ ಕೊಡೆ ಐದು ಹೂವ ಕೊಡೆ || 9 ||
***
Varava koḍe tāyi varava koḍe tāyi varava koḍe
śaradhi sampanne kēḷi seragoḍḍi bēḍuvanthā || pa ||
bāgilu tōraṇa kaṭṭi maduve mun̄ji nāmakaraṇa | anugāla iruvantha varava koḍe || 1 ||
māḍiya maneyoḷagē jōḍu toṭṭila kaṭṭi jōguḷa hāḍuvantha varava koḍe || 2 ||
aṣṭaiśvarya saubhāgya anugāla iruvantha varava koḍe tāye varava koḍe || 3 ||
kaṭṭida māṅgalya kariya maṇisara sthiravāgē iruvantha varava koḍe || 4 ||
heṇṇu makkaḷa haḍedu honnu seragili kaṭṭi | kan’yādāna māḍuvantha varava koḍe || 5 ||
gaṇḍu makkaḷa haḍedu kulavannud’dharisuva | binduli iḍuvantha magana koḍe || 6 ||
śyāllana sughr̥ta pan̄ca bhakṣya paramānna naivēdya iḍuvantha varava koḍe || 7 ||
anna dāna vastra dāna gr̥ha dāna bhū dāna | gōdāna koḍuvantha varava koḍe || 8 ||
raṅga nāyaki ninna muḍiya mēliruvantha| prasannaveṅkaṭanārasi hūva koḍe aidu hūva koḍe || 9 ||
***