Showing posts with label ನಡೆದು ಬಾರಯ್ಯ ಪ್ರಭುವೇ ಶ್ರೀ ರಾಘವೇಂದ್ರ ankita raghavendra. Show all posts
Showing posts with label ನಡೆದು ಬಾರಯ್ಯ ಪ್ರಭುವೇ ಶ್ರೀ ರಾಘವೇಂದ್ರ ankita raghavendra. Show all posts

Thursday, 5 August 2021

ನಡೆದು ಬಾರಯ್ಯ ಪ್ರಭುವೇ ಶ್ರೀ ರಾಘವೇಂದ್ರ ankita raghavendra

 ..

kruti by radhabai

ನಡೆದು ಬಾರಯ್ಯ ಪ್ರಭುವೇ ಶ್ರೀ ರಾಘವೇಂದ್ರ ಪ


ಪರಿಪರಿಯಲಿ ಭಕ್ತ ಜನಗಳೆಲ್ಲಾ ಕರಗಳ ಮುಗಿಯುತ

ಕಾದುನಿಂದಿಹರು ಅ.ಪ


ಕಾರುಣ್ಯಾ ಮೂರ್ತಿನೀ ಕರುಣಿಸದಿದ್ದರೆ ಬೇರಾರ

ಕಾಣೆನೋ ಪ್ರಭುವೇ

ತಡಮಾಡದೆ ಎಮ್ಮ ಮನದ ಸಂತಾಪವ

ಪರಿಹರಿಸಿ ಕಾಯೋ ಗುರುವೇ 1

ನಿನ್ನ ನಂಬಿದೆನಯ್ಯ ಅನ್ಯಾರ ಬೇಡೆನೊ

ಎನ್ನ ಪಾಲಿಸು ಪ್ರಭುವೇ

ನಿನ್ನ ಸಂಕಲ್ಪವೇನೆಂದು ನಾನರಿಯೆನೋ ಅನ್ಯಥಾ

ತಿಳಿಯದೆ ಸಂತೈಸು ಪ್ರಭುವೆ 2

ನಿನ್ನಂಥ ದಾತರಿಲ್ಲವೊ ಜಗದೊಳಗೆ ಪಂಥ ಮಾಡದೆ

ಎಮ್ಮಕಾಯೋ

ಸಂತಸದಲಿ ನಿಶ್ಚಿಂತೆ ಎನಗೆ ಕೊಡು ಶಾಂತ ಮೂರುತಿ

ಶ್ರೀ ರಾಘವೇಂಧ್ರಾ3

***