Showing posts with label ಏನು ಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ vaikunta vittala. Show all posts
Showing posts with label ಏನು ಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ vaikunta vittala. Show all posts

Sunday, 1 August 2021

ಏನು ಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಏನುಕಾರಣ ಯೆನಗೆ ತಿಳಿಯದಿದೇಕೋ

ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ


ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ

ಭರದಿಂದ ಕಲ್ಲು ಮಳೆಯನು ಕರೆಯಲಾಗ

ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ

ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ 1


ದುರಿತ ಭವ ತಿಮಿರ ಶರಧಿಯದಾಂಟಿಸುವ ವೋಲು

ಸುರಿವ ಮಳೆಗತ್ತಲೆಗೆ ಬೋವಿಯಾಗಿ

ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ

ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು 2


ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ

ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು

ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ

ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ 3

***