ಮಂಗಳ ಮಂಗಳ ಜಯಮಂಗಳ ಶುಭ ದೇವದೇವೋತ್ತಮಗೆ ಪ
ಕೇಶವ ನಾರಾಯಣಗೆ ಮಂಗಳ ವಾಸುದೇವ ವಾಮನಗೆ ಮಂಗಳ ಹೃಷೀಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ 1
ಅಚ್ಯುತ ಜನಾರ್ಧನಗೆ ಮಂಗಳ ಮತ್ಸ್ಯಕೂರ್ಮ ವರಾಹಿಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚುಕುಂದವರದ ವಿಷ್ಣುಗೆ ಮಂಗಳ2
ಮಾಧವ ಮಧುಸೂದನಗೆ ಮಂಗಳ ಸಾಧು ಹೃದಯುವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ 3
ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಂಕರುಷಣಿಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ 4
ಪರಮ ಪಾವನ ಭಾರ್ಗವಗೆ ಮಂಗಳ ಕರುಣಾಕರ ಶ್ರೀ ರಾಮಗೆ ಮಂಗಳ ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ ತರಳ ಮಹಿಪತಿಸ್ವಾಮಿಗೆ ಮಂಗಳ 5
****