Showing posts with label ಕೊಂಡಾಡಲಳವೆ ಕರುಣಾನಿಧಿ prasannavenkata satyanatha teertha stutih. Show all posts
Showing posts with label ಕೊಂಡಾಡಲಳವೆ ಕರುಣಾನಿಧಿ prasannavenkata satyanatha teertha stutih. Show all posts

Monday 11 November 2019

ಕೊಂಡಾಡಲಳವೆ ಕರುಣಾನಿಧಿ ankita prasannavenkata satyanatha teertha stutih

by ಪ್ರಸನ್ನವೆಂಕಟದಾಸರು
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.

ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1

ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2

ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3

ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4

ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
***


konDADalaLave karuNAnidhi kAvana
danDa sanjita gurusatyanAthara kIrti ||pa||

SrI vAsudEda tA BAvisi cittadi
BUvalayake sujanAvaLigASraya
vIvenenuta SuBadEvavRukShavanaTTe
Ivara paramahaMsAvalaMbana tALdu
SrI vAyumatadi tatvave lakShisuva prE
kShAvaMtarAgiha jIvakOTigaLa kRu
pAvalOkanadoLiTTa apEkShita
BAvArthagaLane koTTu naMbida
sEvakargaBayaviTTa gururAyana ||1||

BAnu tOruva munne snAnava mADi su
mmAnadindali nEma maunadoLiddu SrI
mAnAthananGriya mAnasadali dRuDha
dhyAnadiM balidu gIrvANa BAShyAmRuta
pAnava janarige sAnurAgadalittu
nAnA tatvArtha vyAKyAnava janarige
tAnaMdu bOdhisida tAmasa
j~jAnavanODisida A kAmadhEnu
venisi eseda gururAyana ||2||

BEdavarjita mattavAda kuMBiya kuMBa
BEdaka singa halAdhAri hari sagu
NOdara sAkAra mAdhava haranuta
pAdanenuta sUtra vEda purANadi
sAdhisi kutsitavAdigaLa
pAdAkrAntara mADi mEdiniyoLu jaya
nAdaBEriya hoyisida muktiya
sAdhana tOrisida BraShTaMku
rOdaya mANisida gururAyana ||3||

kAlakAlake dharma pAlisi yAcaka
jAlake mannisi mUla maMtrOpadESa
pELi pUtara mADi hAlu sakkare tuppa
hOLigyannavanikki mEle dravyavanittu
pAlisi tAyitaMdegaLa haMbala biDi
si lOkadavarigaBilAShA pUrNAnu
kUla cintAmaNiya yatikula
mauLi makuTamaNiya viratiBAgya
SAli suguNaKaNiya gururAyana ||4||

maNNu vanite sati honnina bayakeya
Gannate jaridu pAvanna mahimanAda
cenna satyanidhi tIrathanna karOdBava
tannAkaSheMbuvaBinnavacaMdrike
yannu prakASisi pUrNacandramanante
unnata kaLeyuta cinmaya varada pra
sanna venkaTAdhipana Bajisi nitya
dhanyanenisutippana satyABinava
rannana poredaÀppana gururAyana ||5||
***