Showing posts with label ಕಾಯೋ ಕಮಲಾಯತಾಕ್ಷನಪ್ರಿಯ ರಾಘವೇಂದ್ರ abhinava janardhana vittala. Show all posts
Showing posts with label ಕಾಯೋ ಕಮಲಾಯತಾಕ್ಷನಪ್ರಿಯ ರಾಘವೇಂದ್ರ abhinava janardhana vittala. Show all posts

Monday, 6 September 2021

ಕಾಯೋ ಕಮಲಾಯತಾಕ್ಷನಪ್ರಿಯ ರಾಘವೇಂದ್ರ ankita abhinava janardhana vittala

 ರಾಗ: ಸುರಟಿ ತಾಳ: ಆದಿ

ಕಾಯೊ ಕಮಲಾಯತಾಕ್ಷನಪ್ರಿಯ ರಾಘವೇಂದ್ರ


ಹೇಮಕಶಿಪುಜಾತನೆನಿಸಿ

ನೀ ಮೆರೆದೆ ವಿಖ್ಯಾತ

ಶ್ರೀಮನೋಹರನ ಪ್ರೇಮದೊಳೊಲಿಸಿ ಮ-

ಹಾಮಹಿಮನೆ ಈ ಪಾಮರನನುದಿನ 1

ವ್ಯಾಸಮುನಿರನ್ನಾನೆನಿಸಿ ದೇಶಾಧಿಪರನ್ನ

ಘಾಸಿಗೊಳಿಸದಿನ್ನ ದುರಿತವನಾಶಗೈಸಿ ಮುನ್ನಾ 

ನೀಸಲಹಿದೆ ನಿನ್ನಾಶ್ರಯಿಸಿದೆ ಬಹು

ದಾಸರ ಪೊರೆಯುವ ವಾಸ್ಯತತ್ತ್ವಜ್ಞರ 2

ಶುಭಗುಣಗಣನಿಲಯ ಜನರಿಗೆ

ಶುಭವ ಕೊಡುವ ಜೀಯ

ಅಭಿವಂದಿಪೆನಯ್ಯ ಎನಗೆ ಅಭಯ ಪಾಲಿಸಯ್ಯ

ಅಭಿನವಜನಾರ್ದನವಿಠಲನ ಪಾದಾಂಬುಜಾಶ್ರಯದ್ಹಂಬಲಿರಿಸೆನ್ನ 3

***