ರಚನೆ : ಕಲ್ಲೂರ ಶ್ರೀಕರವಿಠ್ಠಲದಾಸರು
ಗುರುಜಿತಾಮಿತ್ರರ ಹರುಷದಿ ನೆನೆಮನ!
ಗಿರುವರು ಕೋರಿದ ಭಿಷ್ಠೇಯ ಪ್ರತಿದಿನ!!ಪ!!
ಗಿರುವರು ಕೋರಿದ ಭಿಷ್ಠೇಯ ಪ್ರತಿದಿನ!!ಪ!!
ಕರ್ಣಿಕ ಶಿವಪೂರ ಜಿತ್ತಪ್ಪನೀತ!
ನರಹರಿಗುಣಿಸಿದ ಪರಮ ಪ್ರಖ್ಯಾತ!!
ಗುರು ವಿಭುದೇಂದ್ರರ ಕರಕಮಲಜಾ!
ಪರೀಕ್ಷಿತ ನೃಪಗೆ ಭಾಗವತ ಪೇಳಿದಾತ!!೧!!
ನರಹರಿಗುಣಿಸಿದ ಪರಮ ಪ್ರಖ್ಯಾತ!!
ಗುರು ವಿಭುದೇಂದ್ರರ ಕರಕಮಲಜಾ!
ಪರೀಕ್ಷಿತ ನೃಪಗೆ ಭಾಗವತ ಪೇಳಿದಾತ!!೧!!
ಭೀಮದ ಬಲಭಾಗ ಕೃಷ್ಣದೊಳಿರುವ!
ನೇಮದಿ ಭಜಿಪರ ಪ್ರೇಮದಿ ಪೊರೆವಾ!!
ರಾಮಾನಾಮೃತ ನೇಮದಿ ಸೇವಿವಾ!
ಆ ಮನುಜನೆ ಧನ್ಯ ಇವರ ಶೇವಿಸುವಾ!!೨!!
ನೇಮದಿ ಭಜಿಪರ ಪ್ರೇಮದಿ ಪೊರೆವಾ!!
ರಾಮಾನಾಮೃತ ನೇಮದಿ ಸೇವಿವಾ!
ಆ ಮನುಜನೆ ಧನ್ಯ ಇವರ ಶೇವಿಸುವಾ!!೨!!
ಕಡುದಯಾನಿಧಿಯಾದ ಶ್ರೀಕರವಿಠಲನ್ನ!
ಧೃಡದಿಭಜಿಪರ ಪೊರೆವನು ಗೋನದ!!
ಗಿಡದಡಿ ಮನೆಮಾಡಿಕೊಂಡಿರುವನ!
ಎಡಬಿಡದೆ ಪಾದವ ನಂಬುವದೀತನ!!೩!!
**********
ಧೃಡದಿಭಜಿಪರ ಪೊರೆವನು ಗೋನದ!!
ಗಿಡದಡಿ ಮನೆಮಾಡಿಕೊಂಡಿರುವನ!
ಎಡಬಿಡದೆ ಪಾದವ ನಂಬುವದೀತನ!!೩!!
**********
ಗಿರೀಶ ಕುಲಕರ್ಣಿ ಕೊಪ್ಪಳ
ಸಪ್ತಸ್ವರ ದಾಸಸಾಹಿತ್ಯ & ಸಂಗೀತ ಸಮೂಹ, ಕೊಪ್ಪಳ
ಮೊ: 9663423447
**********