Showing posts with label ಯಾಕೆನ್ನ ಮೇಲಿಷ್ಟು ಸಿಟ್ಟು ಭ್ರುಗುಮುನಿ anatadreesha. Show all posts
Showing posts with label ಯಾಕೆನ್ನ ಮೇಲಿಷ್ಟು ಸಿಟ್ಟು ಭ್ರುಗುಮುನಿ anatadreesha. Show all posts

Wednesday 4 August 2021

ಯಾಕೆನ್ನ ಮೇಲಿಷ್ಟು ಸಿಟ್ಟು ಭ್ರುಗುಮುನಿ ankita anatadreesha

ರಾಗ ಶಂಕರಾಭರಣ ತಾಳ ಅಟ್ಟ ಸ್ವರ-ಗಾಂಧಾರ


ಯಾಕೆನ್ನ ಮೇಲಿಷ್ಟು ಸಿಟ್ಟು | ಭ್ರುಗುಮುನಿ | ಯಾಕೆನ್ನ ಮೇಲಿಷ್ಟು ಸಿಟ್ಟು |
ನಾಕೊಡುವೆನು ನಿನಗೀ ಕಾಲಕ್ಕೆ ನೀ | ಬೇಕಾದ್ದು ಬೇಡು ಎಥೇಷ್ಟು || ಪ ||

ಸದ್ದು ಇಲ್ಲದೆ ನಾನಿದ್ದ ಮನೆಗೆ ಬಂದು | ಒದ್ದ ಕಾರಣ ಪೇಳಿಷ್ಟು ||
ಸಿದ್ದಾಗಿ ನೀನು ಬಂದದ್ದು ನಾ ಅರಿಯೆನು | ಬುದ್ದಿ ತಪ್ಪಿತು ಕ್ಷಮಿಸಿಷ್ಟು || ೧ ||

ಛಂದಾಗಿ ಕಾಠಿನ್ಯದಿಂದಿದ್ದ ಎನ್ನೆದೆ | ನೊಂದಿಲ್ಲ ಎಳ್ಳು ಕಾಳಷ್ಟು ||
ಇಂದು ಈ ಕೋಮಲಸುಂದರ ಪಾದವು | ನೊಂದು ಕೊಂಡಿದ್ಹಾವು ಎಷ್ಟೋ || ೨ ||

ಧರೆಯೊಳು ದ್ವಿಜರಿಗೆ ಸರಿಯಾರು ಇಲ್ಲೆಂ | ಬರುವುದು ಭಯ ಭಾಳಷ್ಟು ||
ವರದಾನಂತಾದ್ರೀಶನ ಪರಮ ಭಕ್ತರಿಗೆ | ಬರಬಾರದೆಂದಿಗು ಸಿಟ್ಟು || ೩ ||
***

pallavi


yAkenna mEliSTu siTTu bhrugumuni yAkenna mEliSTu siTTu nA koDuvenu ninagE kAlakE nI bEkAddu bEDu yathESTu


caraNam 1


saddu illade nA idda manege bandu odda kAraNa pELiShTu siddanAgi nInu bandaddu nA ariyenu buddhi tappitu kShamiShTu


caraNam 2


candAgi kAThiNyadindidda ennede nondilla eLLakALaSTu indu I kOmala sundara pAdavu nondu koNDiddAvu eSTO


caraNam 3


dhareyoLu dvijarige sari yAru illendu baruvadu bhaya bahaLaSTu varadAnantAdrIshana parama bhaktarige barabAradendigu siTTu

***