..
ಎಂಥ ಧರ್ಮರಾಯ ಸಂತೋಷ ಬಡಿಸುವ ಅನಂತ ಪ್ರಜರಿಗೆಲ್ಲ ಚಿಂತಾಮಣಿಯು ತಾಎಂಥ ಧರ್ಮರಾಯ ಇಂದಿವರಾಕ್ಷಿ ಪ.
ಒಡಹುಟ್ಟಿದವರೆಲ್ಲ ಬಿಡದೆ ಸೇವಿಸುವರು ಕಡುಭಕ್ತಿಯಿಂದಲೆ ನಡೆನುಡಿ ಬಿಡದೆ 1
ಹರದೆಯರು ರಾಯಗೆ ಪರಿಪರಿ ಸೇವಿಸಿ ಎರಗೋರು ಕಾಲಕಾಲಕೆ ಪರಮ ಭಕ್ತಿಯಲಿ2
ಭೃತ್ಯರು ರಾಯಗೆ ಅತ್ಯಂತ ಸೇವಿಸಿ ಚಿತ್ತವ ಹಿಡಿಯಲು ಉತ್ತಮನೆಂದು 3
ದಾಸರು ರಾಯಗೆ ಸೋಸಿಲೆ ಸೇವಿಸಿಏಸೇಸು ಕಾಲಕ್ಕೆ ಈ ಸ್ವಾಮಿ ಬಯಸೋರು4
ವಿಪ್ರರು ರಾಯಗೆ ಒಪ್ಪೋದು ದೊರೆತನ ತಪ್ಪದೆ ಇರಲೆಂದು ಗೌಪ್ಯದಿ ಜಪಿಸೋರು 5
ಮಿಕ್ಕ ಜನರಿಗೆ ಸಕ್ಕರೆ ಹೇರಮ್ಮಲಕ್ಷ್ಮಿ ರಮಣಗೆ ಸಖ್ಯನು ರಾಯ 6
ಎಲ್ಲ ಜನಕೆ ರಾಯಬೆಲ್ಲದ ಹೇರಮ್ಮಚಲ್ವ ರಾಮೇಶನ ನಲಿವಿನ ಮುಂದೆ 7
****