Showing posts with label ಪೂಜೆಯ ನಾನೇನ ಮಾಡುವೆ ಮಹಾರಾಜ purandara vittala. Show all posts
Showing posts with label ಪೂಜೆಯ ನಾನೇನ ಮಾಡುವೆ ಮಹಾರಾಜ purandara vittala. Show all posts

Saturday, 7 December 2019

ಪೂಜೆಯ ನಾನೇನ ಮಾಡುವೆ ಮಹಾರಾಜ purandara vittala

 ಕಾಖಂಡಕಿ ಶ್ರೀ ಕೃಷ್ಣದಾಸರು
ಪೂಜೆಯ ನಾನೇನ ಮಾಡುವೆ|ಮಹಾ
ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ

ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ|
ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1

ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ
ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2

ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ
ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3

ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ
ಭ್ರಮರ ಅಜಭವರಾದರು ಹರಿಯೇ 4

ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು
ಆರೋಗಣೆಯ ಮಾಡಿ ಅಮರರಾದರು ಹರಿಯೇ 5

ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ|
ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6

ಗುರುವರ ಮಹೀಪತಿನಂದನ ಸಾರಥಿ|ನಿನ್ನ
ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
***********