Showing posts with label ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ bheemesha krishna. Show all posts
Showing posts with label ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ bheemesha krishna. Show all posts

Tuesday, 1 June 2021

ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ ankita bheemesha krishna

ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ

ಬಗೆಬಗೆ ಶೃಂಗಾರವಾಗಿ ಬಂದ ರಂಗನು 1


ಅಂಬರ ಜರನಿರಿಗಳಲಿ ಕುಂದಣದುಡಿದಾರವ ಕಟ್ಟಿ

ಚÉಂದುಳ್ಳ ಭುಜಕೀರ್ತಿ ಕರ್ಣಕುಂಡಲನಿಟ್ಟು2


ಶಂಖ ಚಕ್ರ ಕರಗಳಲ್ಲಿ ಕಂಕಣ ಭೂಷಣಗಳಿಂದ

ಕಿಂಕಿಣಿ ನೂಪುರಗಳಿಂದ ಅಲಂಕಾರವಾಗಿ 3

ಕಸ್ತೂರಿ ಕೇಸರಿಯು ಗಂಧ ಬುಕ್ಕಿ ್ಹಟ್ಟು ಪರಿಮಳದ ಚೆಂದ

ಕರ್ಪೂರ ತಾಂಬೂಲ ಬಾಯಲೊಪ್ಪುವ ರಂಗ 4

ನೀಲವರ್ಣ ನಿತ್ಯ ಕೋಟಿ ಸೂರ್ಯ ಪ್ರಕಾಶ ಮಲ್ಲಿಗೆ-

ಮಾಲೆ ಮುಡಿದು ಹೊರಟ ಜಗದಮೋಹನ ರಂಗ5

ಸಾಲು ಸಾಲು ಮನೆಗಳಲಿ ಮೇಲು ಮೇಲುಪ್ಪರಿಗೆನೇರಿ

ಬಾಲಕೃಷ್ಣ ಬರುವ ಭರವ ನೋಡುತ್ತಿದ್ದರು 6

ವಾರಿಗೆ ಸತಿಯೇರ ತನ್ನ ವಾರೆನೋಟದಿ ನೋಡುತ

ಮಾರನಯ್ಯನು ಬಂದನು ತಾ ಬಜಾರ ಮಧ್ಯದಿ 7

ಚೆಲ್ವೆಯರೆಲ್ಲರು ಅರಳುಮಲ್ಲಿಗೆ ಕರದಲ್ಲಿ ಪಿಡಿದು

ಫುಲ್ಲಾಕ್ಷನ ಮ್ಯಾಲೆ ನಗುತ ಚೆಲ್ಲುತಿದ್ದರು 8

ಯಾದವರೇಶನೆ ನಿನಗೆ ಭೇದವ್ಯಾಕೆನ್ನ ಮ್ಯಾಲೆ

ನೀ ದಯಮಾಡೆನ್ನ ಮನೆಗೆನುತ ರಾಧೆ ಕರೆದಳು 9

ವಜ್ರದ ಗೊಂಬೆಯಂದದಿ ವೈಯಾರಿ ಮೆಲ್ಲನೆ ಬಂದು

ಪದ್ಮನಾಭ ಬಾ ನಮ್ಮನೆಗೆನುತ ಭದ್ರೆ ಕರೆದಳು 10

ಅಂತರಂಗದಲ್ಲಿ ಕೋಟಿ ಪಂಥವ್ಯಾತಕೆನ್ನಮ್ಯಾಲೆ

ಸಂತೋಷದಿ ಬಾರೆನುತ ಜಾಂಬವಂತಿ ಕರೆದಳು 11

ಸತ್ಯಭಾಮೆ ರುಕ್ಮಿಣಿದೇವಿ ಮಿತ್ರೆನೀಲಾ ಜಾಂಬವಂತಿ

ಲಕ್ಷಣಾ ಕಾಳಿಂದಿ ಭದ್ರೆ ಕರೆಯುತಿದ್ದರು 12

ಇಷ್ಟುಮಂದಿ ಸತಿಯರೊಳಗೆ ನಿಷ್ಠುರವಾಗುವೆನೆಂದು

ಎತ್ತ ಕಡೆಗೆ ಪೋಗಲೆಂದು ಶ್ರೀಕೃಷ್ಣ ನುಡಿದನು 13


ಹರಿಯ ಮಾತುಗಳನೆ ಕೇಳಿ ಸರುವರು ಸುಮ್ಮನೆ ನಿಲ್ಲೆ

ಕರದಿ ವೀಣೆಯ ಪಿಡಿದು ಬಂದನು ಭರದಿ ನಾರದ 14

ರಂಗ ನಿನ್ನ ಸತಿಯರಿಂದ ಭಂಗ ಬಂದಿತೇನೊ ನಿನಗೆ

ಇಂದೆನ್ನ ಹಿಂದೆ ಬಾರೆನುತ ನಾರಂದ ಕರೆದನು 15

ಕೇಳಿ ನಾರದರ ಮಾತು ತಾಳಲಾರದೆ ರುಕ್ಷ್ಮಿಣಿಯು

ದಾನ ಒಯ್ದು ದಕ್ಕಿಸಿಕೊಂಡಿರೆಂದು ನುಡಿದಳು 16

ಅಕ್ಕನ ಮಾತಿನ ಬಾಣ ನೆಟ್ಟಿತು ಎನ್ನೆದೆಗೆ ಬಂದು

ಕೃಷ್ಣ ನೀ ಕೇಳೊ ಕೇಳೆಂದು ನುಡಿದಳು ಭಾಮೆ 17

ಬಿಟ್ಟು ಬಾಣವ ಮಾಡಿ ಯುದ್ಧ ದಿಟ್ಟಳೆನಿಸುವುದೆ ಸಿದ್ಧ

ಪೃಥಿವಿಯೊಳಗೆ ಬಾಣನಂದಿ ಎಂದು ಪ್ರಸಿದ್ಧಿ 18

ದಾರಿಗೆ ತೆಗೆಸಿದೆ ನೀನು ಮೋರೆಗಡ್ಡ ಮಂಡಿ ಪನ್ನಿ

ಹೀನ ಕಾರ್ಯವ ಮಾಡಲು ನೀ ಅರಿಯೇನೆ ರುಕ್ಮಿಣಿ 19

ಗುಣನಿಧಿ ಗೋಪಾಲ ಹರಿಗೆ ಮಡದಿ ಎನಿಸುವುದೆ ಸರಿಯೆ

ಮಣಿಯ ಕಳವು ಇಟ್ಟದ್ದು ನಿಮ್ಮ ಗುಣವ ನಾನರಿಯೆ 20

ಮಾಯಕಾರ್ತಿ ಮಾತುಗಳ ಅನ್ಯಾಯವೊ ನ್ಯಾಯವೊ ನಾನು

ಬಾಯಬಿಟ್ಟರೇನುಳಿದೀತೆ ನಿನ ಮಾರ್ಯಾದೆ ರುಕ್ಮಿಣಿ 21

ಸಾಕು ಸತ್ಯಭಾಮೆ ನಿನಗೆ ಯಾಕೆ ಕೋಪ ಬಂದಿತೆಂದು

ನಾಲ್ಕು ತೋಳಿಂದಪ್ಪಿಕೊಂಡನು ಶ್ರೀಕಾಂತ ನಗುತ 22

ಎಲ್ಲ ಸತಿಯರನು ತಾನಿದ್ದಲ್ಲಿಗೇ ಕರೆಸಿದ ಕೃಷ್ಣ

ವಲ್ಲಭೆ ರುಕ್ಮಿಣಿಯ ಚರಣಕ್ಕೆ ಎರಗಿಸಿದನಾಗ 23

ರುಕ್ಮಿಣಿದೇವೇರ ತೊಡೆಯ ವಿಚಿತ್ರದ್ಹಲಿಗೆ ಮಂಚಮಾಡಿ

ನಕ್ಷತ್ರದೊಳು ಚಂದ್ರನಂತೆ ಹೊಳೆಯುತ್ತಿದ್ದನು 24

ಆರ್ಯಳು ಎನ್ನ ಪಟ್ಟದ ಭಾರ್ಯಳು ರುಕ್ಮಿಣಿಯ ಮಾತು

ಮೀರಬ್ಯಾಡಿರೆಂದೆನುತ ಸಾರಿ ಹೇಳಿದ 25

ಹಚ್ಚಿದ್ಹಗಲು ಬತ್ತಿಯಂತೆ ಹದಿನಾರು ಸಾವಿರ ಮಂದಿ

ಭೀಮೇಶ ಕೃಷ್ಣನ ಚರಣಕ್ಕೆರಗಿ ನಗುತ ಕುಳಿತಿರಲು 26

****