Showing posts with label ಏನು ಪೇಳಲಿ vijaya vittala ankita suladi ಮಧ್ಯಾರ್ಜುನ ಮಹಿಮೆ ಸುಳಾದಿ ENU PELALI MADHYARJUNA MAHIMA SULADI. Show all posts
Showing posts with label ಏನು ಪೇಳಲಿ vijaya vittala ankita suladi ಮಧ್ಯಾರ್ಜುನ ಮಹಿಮೆ ಸುಳಾದಿ ENU PELALI MADHYARJUNA MAHIMA SULADI. Show all posts

Thursday 12 November 2020

ಏನು ಪೇಳಲಿ vijaya vittala ankita suladi ಮಧ್ಯಾರ್ಜುನ ಮಹಿಮೆ ಸುಳಾದಿ ENU PELALI MADHYARJUNA MAHIMA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ ಮಧ್ಯಾರ್ಜುನಮಹಿಮೆ ಸುಳಾದಿ 

(ಕಾವೇರಿಯ ದಕ್ಷಿಣ ತೀರದಲ್ಲಿರುವ ಕ್ಷೇತ್ರ)


 ರಾಗ : ಕೀರವಾಣಿ 

 ಧ್ರುವತಾಳ 


ಏನು ಪೇಳಲಿ ಮಧ್ಯಾರ್ಜುನದ ಮಹಾಮಹಿಮೆ 

ಏಣಿ ಸಾಲಳವೇನು ಜ್ಞಾನಿಗಳಿಗೆ 

ಕ್ಷೋಣಿಯೊಳಗೆ ಪುಟ್ಟಿ ಅನಂತಾಜನುವಾದಲ್ಲಿ 

ಮಾಣಾದೆ ಮಾಡಿದಾ ದುರಿತಾವೆಂಬೊ 

ಮಾಣಾದೆ ಮಾಡಿದಾ ದುರಿತಾವೆಂಬೊ 

ಕಾನನಾ ರಾಸಿಗೆ ಹವ್ಯವಾಹನನಾಗಿ 

ತಾನಿಗಾಲಿಪ್ಪಾದು  ತವಕದಿಂದ 

ಗೇಣಿಗೇಣಿಗೆ ನಿಂದು ಯಾತ್ರಿಯಾ ಪತಿಕರಿಸಿ 

ಆನಂದಾವಾಗುವದು ಅನುಗಾಲವೊ 

ಭಾನುಕೋಟಿತೇಜಾ ವಿಜಯವಿಠಲನ್ನ 

ನೀನೆಂದು ನಿತ್ಯ ಸ್ತುತಿಸೆ ಸಾನುಕೂಲಾವೆನ್ನಿ ll1ll


 ಮಟ್ಟತಾಳ 


ಕಶ್ಯಪ ವಿಭಾಂಡ ಋಷಿಗಳೀರ್ವಾರು 

ಹೃಷಿಕೇಶನ ಒಲಿಸುವೆವು ಎನುತಲಿ 

ಕುಶಲಮತಿಯಲ್ಲಿ ವಸುಧಿಯೊಳಗೆ ಯಮನಾ 

ದೆಶೆಯಲ್ಲಿಗೆ ಬಂದು ತೃಷಿಯಾದಿಯ ತೊರೆದು 

ಹಸನಾಗಿ ಇರುತಿರೆ 

ವಸುದೇವ ತನಯಾ ವಿಜಯವಿಠಲರೇಯಾ 

ಶಿಶುವಿನಲಾಟಾರ್ಚಿಸಿ ನೋಡುವೆವೆಂದು ll2ll


 ತ್ರಿವಿಡಿತಾಳ 


ಈ ಪರಿ ತಪಸನು ಮಾಡಾಲು ಈರ್ವರಿಗೆ 

ಗೋಪಾಲಕೃಷ್ಣನು ಅರ್ಜುನ ಮರದೆಡಿಯಾ 

ತಾ ಪ್ರೇಮದಿಂದಲಿ ಮುನಿಗಳಿಗೆ ತನ್ನಯಾ 

ರೂಪವನ್ನು ತೋರಿ ರಚನೆಯಿಂದ 

ತಪಸಿಗಾಮನೊ ಬಯಕಿಯ ಸಲ್ಲಿಸಿ 

ದ್ರೌಪದಿವರದನು ಮರದಾ ಮಧ್ಯ 

ರೂಪವಡಗಿಸಿಕೊಂಡು ಪೋದಾನಂದಿನಾರಭ್ಯ 

ಭೂಪಾರದೊಳಗೆ ಮಧ್ಯಾರ್ಜುನನೆಂಬಾ 

ತಾ ಪೆಸರಾಗಿ ಈ ಕ್ಷೇತ್ರ ಪೆಸರಾಗಿ ಈ ಕ್ಷೇತ್ರ ಗುರುತಾದರೂ 

ನಾ ಪೇಳಾಲಿಂನ್ನಿನು ವಿಚಿತ್ರಾ ಉ-

ಮಾಪತಿ ವಿಜಯವಿಠಲರೇಯಾ ಅನಂತ 

ರೂಪಾನಗಣಿತ ಮಹಿಮಾ ಮೆರೆದಾನಿಲ್ಲಿ ll3ll


 ಅಟ್ಟತಾಳ 


ಕಾರುಣ್ಯಾಮೃತಾತೀರ್ಥ ಪಾರಮಾರ್ಥದ 

ಕಾವೇರಿಯಾ ಸ್ನಾನವು ಶ್ರೀರಂಗನಾಥನಾ

 ಶ್ರೀಪಾದ ಪದುಮವ ಚಾರುಮನದಲ್ಲಿ 

ಸ್ಮರಿಸುತ್ತ ಮಾಡಲು ಮೀರಿದ ದುರಿತವ

ವಾರಿಧಿ ಬತ್ತಿ ಸಂ-

ಸಾರದಿಂದಲಿ ಉದ್ಧಾರವಾಗುವುದು 

ವಾರುಣೀಂದ್ರವಂದ್ಯ ವಿಜಯವಿಠಲ ತಾನೆ 

ಭಾರಕರ್ತನಾಗಿ ಸಾರೆದಲಿಪ್ಪಾ ll4ll


 ಆದಿತಾಳ 


ಎಲ್ಲಿ ಪೋಗದಿದ್ದ ಪಾಪ 

ಇಲ್ಲಿ ಬಿಟ್ಟು ಪೋಪುದು 

ಎಳ್ಳನಿತು ಯಾತ್ರಿ ಬಿಡದೆ 

ಉಳ್ಳದ್ದು ಮಾಡಿ ಇದ್ದಲೀ ವೇಗಾದಲ್ಲಿ 

ಸಲ್ಲಾದ ಸಂಶಯ ಹರಿಯ 

ಬಲ್ಲವರಿಗೆ ಇದರ 

ಸೊಲ್ಲು ಒಂದು ಕೇಳಾಲು ಕೈ-

ವಲ್ಯಾವಾಗುವದು ಸಿದ್ಧಾ 

ಬಲ್ಲಿದ ಶ್ರೀ ವಿಜಯವಿ -

 ಠಲನ ಕರುಣದಿಂದ 

ಚುಲ್ಲಿಕ ನಡತಿ ಪೋಗಿ 

ಒಳ್ಳೆ ಫಲ ದೊರಕುವದೂ ll5ll


 ಜತೆ 


ಮಧ್ಯಾರ್ಜುನದ ಯಾತ್ರಿ ಮಾಡಾಲು ಮನವರಿತು 

ಬಿದ್ದು ಹೋಹದು ಫಲಾ ನೀವ ವಿಜಯವಿಠಲ ll6ll

*******