ಮಧ್ವರಾಯರ ದೇವತಾರ್ಚನೆಯ ||ಪ||
ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ||
ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು
ಲೀಲೆ ದಿಗ್ವಿಜಯ ರಾಮಮೂರ್ತಿ ಒಂದು
ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು
ಚೆಲುವಸುದರ್ಶನಗಳೆರಡು ಚಕ್ರಾಂಕಿತಗಳೈದು ||
ಅಭಿಷೇಕಶಂಖ ಒಂದು ಅಕ್ಷಯ ಪಾತೆಯು ಒಂದು
ಶುಭನಿಧಿಯ ಬಲಮುರಿ ಶಂಖ ಒಂದು
ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮುದ್ರೆ ಒಂದು
ಚಕ್ರಾಂಕಿತಗಳೆರಡು ಬಾಣವೆರಡು ||
ವೇದವ್ಯಾಸಮೂರ್ತಿ ನಾಲ್ಕು ಕ್ಷೀರದಿ ಲೋಲಾಡುವ ಕೂರ್ಮ ಒಂದು
ಸ್ಮರಿಸಿ ಇಪ್ಪತ್ತೆಂಟು ಮೂರುತಿಗಳನು
ಪುರಂದರವಿಠಲನ್ನ ಪೂರ್ಣ ಭಕ್ತರೆಂಬ
ಈ ರಘುನಾಥ ತೀರ್ಥರು ಎಷ್ಟು ಪುಣ್ಯವಂತರೊ ||
***
ರಾಗ ಕಾಂಭೋಜ ಝಂಪೆ ತಾಳ (raga tala maydifferinaudio)
Madhvarayara devatarcaneya ||pa||
Prasiddha raghunatharu pujisuva sobagina ||a||
Mula ragupati ondu muddu janaki ondu
Lile digvijaya ramamurti ondu
Salagrama hayagriva modaladuvu nalku
Cheluvasudarsanagaleradu chakrankitagalaidu ||1||
Abishekasanka omdu akshaya pateyu ondu
Subanidhiya balamuri sanka ondu
Ubaya pascimadhena ondu uttamavada mudre ondu
Cakrankitagaleradu banaveradu ||2||
Vedavyasamurti nalku kshiradi loladuva kurma ondu
Smarisi ippattentu murutigalanu
Purandaravithalanna purna baktaremba
I raghunatha tirtharu eshtu punyavantaro ||3||
***
pallavi
madhvarAyara dEvArcaneya
anupallavi
prasiddha raghunAtharu pUjisuva sobagina
caraNam 1
mUla raghupati ondu muddu jAnaki ondu lIle digvijaya rmamUrti ondu
shAlagrAma hyagrIva modalAduvu nAlku celuva sudarshanagaLeraDu cakrAnkitagaLeradu
caraNam 2
abhiSEka shankha ondu akSaya pAteyu ondu shubhanidhiya balamuri shankha ondu
ubhaya pashcimadhEna ondu uttamavAda mudre ondu cakrAnkitagaLeraDu bANaveraDu
caraNam 3
vEdavyAsa mUrti nAlku kSiradi lOlADuva kUrma ondu smarisi ippatteNTu mUrutigaLanu
purandara viTTalanna pUrNa bhaktaremba I raghunAtha tIrttaru eSTu puNyavantaro
***
ಮಧ್ವರಾಯರ ದೇವತಾರ್ಚನೆಯ ||ಪ||
ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ||
ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು
ಲೀಲೆ ದಿಗ್ವಿಜಯ ರಾಮಮೂರ್ತಿ ಒಂದು
ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು
ಚೆಲುವಸುದರ್ಶನಗಳೆರಡು ಚಕ್ರಾಂಕಿತಗಳೈದು ||1||
ಅಭಿಷೇಕಶಂಖ ಒಂದು ಅಕ್ಷಯ ಪಾತೆಯು ಒಂದು
ಶುಭನಿಧಿಯ ಬಲಮುರಿ ಶಂಖ ಒಂದು
ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮುದ್ರೆ ಒಂದು
ಚಕ್ರಾಂಕಿತಗಳೆರಡು ಬಾಣವೆರಡು ||2||
ವೇದವ್ಯಾಸಮೂರ್ತಿ ನಾಲ್ಕು ಕ್ಷೀರದಿ ಲೋಲಾಡುವ ಕೂರ್ಮ ಒಂದು
ಸ್ಮರಿಸಿ ಇಪ್ಪತ್ತೆಂಟು ಮೂರುತಿಗಳನು
ಪುರಂದರವಿಠಲನ್ನ ಪೂರ್ಣ ಭಕ್ತರೆಂಬ
ಈ ರಘುನಾಥ ತೀರ್ಥರು ಎಷ್ಟು ಪುಣ್ಯವಂತರೊ ||3||
******
ಶ್ರೀಮದುತ್ತರಾದಿಮಠದಲ್ಲಿ ಪ್ರತಿನಿತ್ಯ ಪೂಜೆಗೊಳ್ಳುವ ಶ್ರೀಮನ್ಮಧ್ವಾಚಾರ್ಯ ಕರಾರ್ಚಿತವಾದ ೨೮ ಪ್ರತಿಮೆಗಳ ಬಗ್ಗೆ ತಿಳಿಸಿಕೊಡುವ, ದಾಸಶ್ರೇಷ್ಠ ಪುರಂದರದಾಸರ ಕೃತಿ ಮಧ್ವರಾಯರ ದೇವತಾರ್ಚನೆಯ ರಘುನಾಥರು ಪೂಜಿಸುವ ಸೊಬಗು ಈ ಸಾಹಿತ್ಯದ ಅನುಸಂಧಾನ
*******