Showing posts with label ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ tandevaradagopala vittala. Show all posts
Showing posts with label ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ tandevaradagopala vittala. Show all posts

Thursday 5 August 2021

ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

(ಸರಸ್ವತಿ)


ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ 1

ಗಹನ ಮಹಿಮಳೆ ಘನ ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ 2

ಆವ ಜನುಮದ ಪುಣ್ಯ ಪ್ರಭಾವವೋ ಕಾಣೆ ನಿನ್ನ ಪಾದಾಶ್ರಯಿಸಿದ ಕಾರುಣ್ಯನಿಧಿಯ ಪರಮ ಹರುಷವಾಯ್ತು ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ 3

ಸಾರಮತದ ವಿಚಾರವನ್ನು ತಾರತಮ್ಯಗನುಸಾರವಾಗಿ ಅರುಪು ಸರಸಿಜಮುಖಿಯೆ ನಿನ್ನ ಸರಸಿಜ ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ 4

ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ 5

ಜತೆ :ಮಾತೆ ನಿನ್ನ ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ 6

***