Showing posts with label ವಂದಿಸಿದರ ಕಾವೆ ವರವನೀವೆ prasannavenkata. Show all posts
Showing posts with label ವಂದಿಸಿದರ ಕಾವೆ ವರವನೀವೆ prasannavenkata. Show all posts

Saturday, 16 November 2019

ವಂದಿಸಿದರ ಕಾವೆ ವರವನೀವೆ ankita prasannavenkata

by ಪ್ರಸನ್ನವೆಂಕಟದಾಸರು
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯ ಪ.

ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1

ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2

ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3

ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4

ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
*******