RSS song .
ದುಃಖಿತ ಜನತೆಯ ಕಂಬನಿ ಒರೆಸಿ
ಮುಚ್ಚಿದಹಂಕಾರದ ಕದ ಸರಿಸಿ
ಸಾಗುವ ಬಾ ವರವೈಭವದೆಡೆಗೆ
ಸಾಧನೆಯ ಉತ್ತುಂಗುದ ಕಡೆಗೆ
ಉನ್ನತಿಯಾ ಗುರಿ ಸೇರುವವರೆಗೆ
ಸಾಗುವ ಬಾ ಸಾಗುವ ಬಾ ||ಪ||
ಎತ್ತರ ನಿಂತಿಹ ಧವಳ ಹಿಮಾಚಲ ಧೈರ್ಯವ ತುಂಬಿಸಲಿ
ಉನ್ನತ ಭಗವೆಯ ಮಂಗಳ ಲಾಸ್ಯವ ಜಲಧಿಯು ಬಿಂಬಿಸಲಿ
ಜೀವ ಜಲಂಗಳ ಮಂಜುಳಧಾರೆಯು ಸ್ಫೂರ್ತಿಯ ಉಕ್ಕಿಸಲಿ
ಉಜ್ವಲ ಚರಿತೆಯ ಪ್ರಜ್ವಲ ದೀಪವು ದಾರಿಯ ತೋರಿಸಲಿ ||೧||
ದೈನ್ಯ ನಿರಾಶೆಯ ಕಾಲವು ಕಳೆಯಿತು ಇದು ಗೆಲುವಿನ ಯುಗವು
ಶೌರ್ಯ ಪರಾಕ್ರಮ ಹೊಂದಲಿ ಇಂದು ತಲೆಬಾಗಲಿ ಜಗವು
ನವನಿರ್ಮಾಣದ ಪಾವನ ಕಾರ್ಯಕೆ ಸಾಧನ ಸಂಘಟನೆ
ಐಕ್ಯತೆಯೊಂದೆ ಏಳ್ಗೆಯ ದಾರಿಯು ರಾಷ್ಟ್ರೋದ್ಧಾರಕನೆ ||೨||
ಅಡೆತಡೆಗಳ ಅಡಿಪಾಯಗವನಲುಗಿಸಿ ಭೋರ್ಗರೆಯುತ ಸಾಗು
ಕೇಡಿನ ಜಾಡನು ಕಿತ್ತೊಗೆಯುವ ನವ ಭಾರ್ಗವ ನೀನಾಗು
ಅಂಕೆಯ ಮೀರಿದ ಧೂರ್ತರ ಆರ್ಭಟ ಬಾಗಲಿ ಅಂಕುಶಕೆ
ಭಾರತ ಭೂಮಿಯ ಕೀರ್ತಿಯ ಬಾವುಟ ಏರಲಿ ಆಗಸಕೆ ||೩||
***
duHKita janateya kaMbani oresi
muccidahaMkArada kada sarisi
sAguva bA varavaiBavadeDege
sAdhaneya uttuMguda kaDege
unnatiyA guri sEruvavarege
sAguva bA sAguva bA ||pa||
ettara niMtiha dhavaLa himAcala dhairyava tuMbisali
unnata Bagaveya maMgaLa lAsyava jaladhiyu biMbisali
jIva jalaMgaLa maMjuLadhAreyu sphUrtiya ukkisali
ujvala cariteya prajvala dIpavu dAriya tOrisali ||1||
dainya nirASeya kAlavu kaLeyitu idu geluvina yugavu
Sourya parAkrama hoMdali iMdu talebAgali jagavu
navanirmANada pAvana kAryake sAdhana saMGaTane
aikyateyoMde ELgeya dAriyu rAShTrOddhArakane ||2||
aDetaDegaLa aDipAyagavanalugisi BOrgareyuta sAgu
kEDina jADanu kittogeyuva nava BArgava nInAgu
aMkeya mIrida dhUrtara ArBaTa bAgali aMkuSake
BArata BUmiya kIrtiya bAvuTa Erali Agasake ||3||
***