ಮೂಲನಾರಾಯಣ ವಟಪತ್ರಶಾಯಿ
ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ.
ಎಂದೆಂದಿಗೂ ಎನಗೆ ತಂದೆ ನೀ ದೇವಾ
ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ.
ಸ್ವಚ್ಛ ಮನವಮಾಡು ಮತ್ಸರೂಪಕನೆ
ತುಚ್ಛ ಮನಕೊಂದ ವಿಶ್ವವ್ಯಾಪಕನೆ 1
ಮುಂದೆನ್ನ ಉದ್ಧರಿಸು ಮಂಧರೋದ್ದರನೆ
ಇಂದ್ರಾದಿ ಸುರರಿಂದ ವಂದ್ಯಾಸುರವರನೆ 2
ಹಿರಣ್ಯಾಕ್ಷನ ತರಿದಂಥ ಧೀರ
ಭರಧಿ ವೇದವ ತಂದ ಮಹಿಮೆ ಅಪಾರ 3
ತರಳ ಪ್ರಹ್ಲಾದನ ತಲೆಗಾಯ್ದ ರೂಪ
ಸರಳ ಮತಿಯನಿತ್ತು ಪಾಲಿಸು ಶ್ರೀಶ 4
ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ
ಯೊಳ ಎನ್ನ ಮನವಿಡು ವಾಮನಮೂರ್ತಿ 5
ಕ್ಷತ್ರಿಯ ಕುಂಭವ ಸವರಿದ ರಾಮ
ಶತಷಟ್ಯಂದರ ಬಡಿದ ದಿವ್ಯ ನಾಮ 6
ದಾನವ ಕುಲಕುಟಾರ ಶ್ರೀ ರಾಮ
ಮಾನಾಭಿಮಾನವು ನಿನ್ನದೋ ರಮ 7
ಮಲ್ಲರ ಗೆದ್ದಂಥ ದೂಕುಳ ವೈರಿ
ಗೊಲ್ಲಬಾಲಕರ ಕೂಡಾಡಿದ ಶೌರಿ
ಸೊಲ್ಲು ಸೊಲ್ಲಿಗೆ ನಿನ್ನ ನಾಮಕೊಡು ಶೌರಿ 8
ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ
ಉಪಗಮನ ವೀಯೋ ವಿಶ್ವೇಶ ಸುe್ಞÁನ 9
ಕಲಿಮುಖದೈತ್ಯರ ಅಳಿಯುವ ಕಲ್ಕಿ
ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ10
ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು
ಶರಣುಜನರಪಾಲ ಏನು ಬಂದಾಗ್ಯು 11
****