Showing posts with label ಗೋದಾ ಎನ್ನೊಳು ವಿನೋದದಿಂದ ಮಾತಾಡಿ ತೋರಿಸೆ ನಿನ್ನ bheemesha krishna GODA ENNOLU VINODADINDA MAATAADI TORISE NINNA. Show all posts
Showing posts with label ಗೋದಾ ಎನ್ನೊಳು ವಿನೋದದಿಂದ ಮಾತಾಡಿ ತೋರಿಸೆ ನಿನ್ನ bheemesha krishna GODA ENNOLU VINODADINDA MAATAADI TORISE NINNA. Show all posts

Wednesday, 1 December 2021

ಗೋದಾ ಎನ್ನೊಳು ವಿನೋದದಿಂದ ಮಾತಾಡಿ ತೋರಿಸೆ ನಿನ್ನ ankita bheemesha krishna GODA ENNOLU VINODADINDA MAATAADI TORISE NINNA

ಗೋದಾ ಎನ್ನೊಳು ವಿನೋದದಿಂದ

ಮಾತಾಡಿ ತೋರಿಸೆ ನಿನ್ನ ಪಾದ ಪ

ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು

ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ 1

ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ

ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ 2

ದೂರದಿ ಬಂದೆ ನಾ ಗೋದಾವರಿಯೆ ನೀನು

ತೋರೆ ಭೀಮೇಶಕೃಷ್ಣನ್ನೂರು ದಾರಿಗಳ 3

****