Showing posts with label ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ bheemesha krishna. Show all posts
Showing posts with label ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ bheemesha krishna. Show all posts

Wednesday 1 September 2021

ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ankita bheemesha krishna

 ..

ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ


ಅಂದು ಗಜನು ತಾನು ಬಂದು ತಾ

ಬಂಧು ಬಳಗವ ಕೂಡಿ ಸೊಂಡಿ-

ಲಿಂದ ನೀರನು ಕಲಕಲಾಕ್ಷಣ

ಒಂದು ಮಕರ್ಹಲ್ಲಿಂದ ಪಿಡಿಯೆ ಮು-

ಕುಂದ ನೀನೆ ಗತಿಯೆಂದರಾಕ್ಷಣ

ಬಂದು ಒದಗಿದ್ಯೊ ಸಿಂಧುಶಯನನೆ 1


ದುರುಳಾಸುರನು ತನ್ನ ಕರುಳ ತನ

ಕರುಳನಿಟ್ಟುರಿಯಲ್ಲಿ

ಗರಳ ಹಾಕಿ ಬಾಧಿಸಲು ಖಳನು

ಕಾರಣ ಕಂಬದಲಿ ಬಂದೆಳೆದು ಅವನುರ

ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ

ಕೊರಳಲ್ಲಿರಿಸಿದ ಕೋಮಲಾಂಗನೆ 2


ಪಿತನ ತೊಡೆಯಲಿದ್ದ ಸುತನ ಕಂಡು

ಸುತನ ಸುರುಚಿಯು ತಾನಾಗ

ಹಿತದಂತ್ವಾಕ್ಯಗಳನು ನುಡಿಯಲು

ಅತಿಬ್ಯಾಗದಲಜಸುತನ ನುಡಿ ಕೇ

ಳುತಲಿ ತಪವನು ಚರಿಸಲಾಕ್ಷಣ

ಪತಿತಪಾವನ ಪರಮ ಕರುಣದಿ

ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3


ಬಾಡಿ ಬಳುಕುವ ದ್ವಿಜನ ನೋಡಿ ತಾ

ನೋಡಿ ತಂದವಲಕ್ಕಿ ಬೇಡಿ

ಆಡಿ ಭಕ್ತನ ಕೂಡ ನಯನುಡಿ

ಮಾಡಿ ಕರುಣವ ತನ್ನ ದಯ ಸೂ-

ರ್ಯಾಡಿ ಸಖಗೀಡಿಲ್ಲದರ್ಥವ

ನೀಡಿದ್ಯೊ ಬಹು ರೂಢಿಗಧಿಕನೆ 4


ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ

ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ

ನಡೆದಸುರ ಪಿಡಿದೆಳೆಯೆ ಸೀರೆಯ

ಕಡೆಯ ಕಾಣದೆ ಖಳನು ಧರೆಯೊಳು

ಬಳಲಿ ಬೀಳಲು ಭೀಮನ್ವಲ್ಲಭೆ-

ಯುಡುಗೆಗಕ್ಷಯ ನುಡಿದ ಕೃಷ್ಣನೆ 5


ಸಿಂಧುಶಯನಾರವಿಂದನಯನಾರ-

ವಿಂದ ನಯನ ಅಸುರರಿಗತಿ ಭಯಂಕರನಾ-

ಗೆಂದಿಗಾದರು ನಿನ್ನ ನಾಮಸುಧೆ

ಯಿಂದ ಸುಖ ಸುರಿವಂತೆ ಮಾಡು ಮು-

ಕುಂದ ಭೀಮೇಶಕೃಷ್ಣ ನಿನ್ನ ಪ-

ದಾಂಬುಜವ ತೋರಾನಂದದಿಂದಲಿ 6

***