ರಾಗ: ದರ್ಬಾರ್ ಕಾನಡ ತಾಳ: ಆದಿ
ಗುರುರಾಜನ ನಾಮ ಪಾವನ ಗುಣ ನಾಮ ಪ
ಪರಮಮಂಗಳನಾಮ ನಿರುತ ಕಲ್ಯಾಣಧಾಮ ಅ.ಪ
ಯೋಗಿವಂದ್ಯನನಾಮ ಭಾಗವತಪ್ರೀಯನಾಮ
ರೋಗಹರ ಗುರು ರಾಘವೇಂದ್ರರನಾಮ 1
ಪತಿತಪಾವನನಾಮ ಯತಿಶ್ರೇಷ್ಠನನಾಮ
ಗತಿಹೀನರಿಗೆ ಸದ್ಗತಿಯ ತೋರುವ ನಾಮ 2
ಪರಮಾತ್ಮಪ್ರೀಯನಾಮ ಪರಮಪವಿತ್ರ ನಾಮ
ವರಮಂತ್ರಾಲಯನರಸನ ಶುಭನಾಮ 3
ಸಂತರ ಸುಧಾಮ ನಿಶ್ಚಿಂತರ ವರಧಾಮ
ಚಿಂತೆಯ ನಿರ್ನಾಮಗೈಯ್ಯುವ ಶುಭನಾಮ 4
ಭಕ್ತರಪೋಷಕನಾಮ ಶಕ್ತಶ್ರೀಗುರುನಾಮ
ಭಕ್ತರಕಾಯ್ವ ಶ್ರೀಕೃಷ್ಣವಿಠಲನನಾಮ 5
***