Showing posts with label ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ vijaya vittala. Show all posts
Showing posts with label ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ vijaya vittala. Show all posts

Wednesday, 16 October 2019

ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ankita vijaya vittala

ನೆನೆಸು ಮನವೆ ನಲಿವಿನಿಂದಲಿ
ನೆನೆಸು ಮನವೆ ನಲಿವಿನಿಂದಲಿ
ಮನಸಿಜನ್ನ ಪೆತ್ತ ಹರಿಯ
ವನಜ ಚರಣವನ್ನು ಹೃ
ದ್ವನಜದೊಳಗೆ ನಿಲಿಸಿ ನಗುತ ಪ

ಪ್ರಳಯದಲ್ಲಿ ವರ ರಮಾ ಕ
ಳವ ತಾಳಿ ಲೀಲೆಯಲ್ಲಿ
ಪೊಳವ ಕಂಗಳಿಂದ ಕಿಡಿ
ಗಳನು ತೋರಿ ಕುಣಿವುತ
ಜಲಜ ಪೀಠ ಸುರಪ ಪುಲಿದೊ
ಗಲ ವಸನ ಉಳಿದ ಸುರರ
ಅಳಿದು ಏಕಮೇವನಾಗಿ
ನಲಿವ ನಾರಸಿಂಹನೆಂದು 1

ಜರಾಮರಣರಹಿತ ಸುಜ
ನರನ ಕಾಯ್ದು ಕರುಣದಲ್ಲಿ
ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ
ಪರಮನೆಂದೆನಿಸಿ ಚರಿಸುತಿಪ್ಪ
ಅರುಣಪ್ರಭೆಗೆ ಕೋಟಿ ಮಿಗಿಲು
ಪರಮಪುರುಷ ಸಿರಿಧರನ್ನ 2

ಕೆಡದೆ ಪರಮ ಭಕುತಿ ಮಾರ್ಗ
ವಿಡಿದು ಗರ್ವವೆಂಬ ಕವಚ
ದುರುಳ ಚೇತನಕ್ಕೆ
ಕೊಡದೆ ಮನಸು ವಿನಯದಿಂದ
ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ
ಬಿಡದೆ ನುಡಿಯೆ ಬಂದ ಅವ
ಘಡವ ದಾಟಿಸು ವೊಲಿದು ಕಾಯುವಾ3
*********