ನಿನ್ನನೆ ನಮೊ ಎಂಬೆವ ಇಂದಿರಾ ದೇವಿನಿನ್ನನೆ ನಮೊ ಎಂಬೆವ ಬಿನ್ನಹ ಲಾಲಿಸುಪನ್ನಗ ಶಯನನ ಘನ್ನ ಪಟ್ಟದ ರಾಣಿ ಪ.
ಬಾಲೆ ಇಂದಿರೆ ನಿನ್ನ ಕಾಲಿಗೆ ವಂದಿಸಿ ಜಾಲಗಾರುತಿಯರ ಸೋಲಿಸಬೇಕೆಂದು 1
ಗುಜ್ಜಿ ಇಂದಿರೆ ನಿನ್ನ ಹೆಜ್ಜೆ ಹೆಜ್ಜೆಗೆ ನಮಿಸಿಅರ್ಜುನನ ಮಡದಿಯರ ಲಜ್ಜೆಗೈಸೆವೆಂದು2
ನಿತ್ಯ ಮುಕ್ತಳೆ, ನಿನ್ನ ಅತ್ಯಂತ ಬಲಗೊಂಬೆ ಉನ್ಮತ್ತೆಯರ ಗರವು ಒತ್ತಿಬಂದೆವೆಂದು 3
ವ್ಯಾಲಾಶಯನನ ರಾಣಿ ಬಹಳೆವಂದಿಸಿಗೈಯ್ಯಾಳಿಯರ ಮುಯ್ಯಾ ನಿವಾಳಿಸಬೇಕೆಂದು 4
ಪ್ರಾಣೇಶ ನರಸಿಯ ಕಾಣುತ ವಂದಿಸಿಜಾಣಿಯರ ಮನೆಗ್ಹೋಗಿ ಆಣಿ ಬಿಡಿಸೇವೆಂದು5
ಜರದ ಕುಪ್ಪುಸಸೀರೆ ಸರಿಗೆ ದೋರೆಯನಿಟ್ಟುಕರಗಳ ಮುಗಿದೆವ ವರಗಳ ಪಾಲಿಸು6
ಥೋರ ಮುತ್ತಿನ ದಿವ್ಯಹಾರ ಭಾರವನಿಟ್ಟುನಾರಿಯರ ಗೆಲಿಸುವ ಭಾರವ ರಾಮೇಶಗೆ ವಹಿಸೆಂದು7
***