Showing posts with label ಧೊರೆತನ ಮಾಡುವರೀ ಪರಿಯಾಗಲು pranesha vittala. Show all posts
Showing posts with label ಧೊರೆತನ ಮಾಡುವರೀ ಪರಿಯಾಗಲು pranesha vittala. Show all posts

Tuesday, 12 November 2019

ಧೊರೆತನ ಮಾಡುವರೀ ಪರಿಯಾಗಲು ankita pranesha vittala

by ಪ್ರಾಣೇಶದಾಸರು
ಧೊರೆತನ ಮಾಡುವರೀ ಪರಿಯಾಗಲು |ತರವೇ ರುಕ್ಮಿಣೀಪತಿಕೇಳು ಪ

ಬಲು ಬಲು ಋಷಿಗಳು ತಪವನೆ ಮಾಡಿ ನಿನ್ನ |ನಿಲುವಗಾಣದೆ ಬಳಲುವರು ||ಘಳಿಗೆ ಬೇಸರದಲೆ ಊಳಿಗದವನಂತೆ |ಬಲಿಯ ಬಾಗಿಲು ಕಾಯ್ವರೇ 1

ಜಲಜ ಸಂಭವ ಈಶೇಂದ್ರಾದಿ ದೇವತೆಗಳು |ಬಿಡದೆ ನಿನ್ನ ವಂದಿಸುತಿರಲು |ಬಡವನಂದದಿ ಕರೆದಾಗಲೆ ತಡೆಯದೆ |ನಡಿಸುವರೆ ಪಾರ್ಥನ ರಥವ 2

ಸಚ್ಚಿದಾನಂದನಿತ್ಯತೃಪ್ತ ಪೂರ್ಣ ಕಾಮನೆಂದು |ಹೆಚ್ಚಾಗಿ ವೇದ ಕೂಗುತಿರಲು ||ಹುಚ್ಚು ಪ್ರಾಣೇಶ ವಿಠ್ಠಲನಯ್ಯನೆ ಶಬರಿಯ |ಉಚ್ಚಿಷ್ಠ ಹಣ್ಣ ಮೆಲ್ಲುವರೆ 3
*******