Showing posts with label ಮಂಗಳಂ ಜಯ ಮಂಗಳಂ ಸಾಗರದೊಳಾಡುವ purandara vittala. Show all posts
Showing posts with label ಮಂಗಳಂ ಜಯ ಮಂಗಳಂ ಸಾಗರದೊಳಾಡುವ purandara vittala. Show all posts

Friday, 6 December 2019

ಮಂಗಳಂ ಜಯ ಮಂಗಳಂ ಸಾಗರದೊಳಾಡುವ purandara vittala

ಮಂಗಳಂ ಜಯ ಮಂಗಳಂ ||ಪ||

ಸಾಗರದೊಳಾಡುವ ಮತ್ಸ್ಯನಿಗೆ
ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ವೇಗದಿಂದಲಿ ಭೂಮಿಯ ತಂದ ವರಹಗೆ
ಕೂಗಿದ ಶಿಶುಪರಿಪಾಲನಿಗೆ ||

ವಾಸವಾನುಜ ಪರಶುವರಾಯುಧ
ದಾಶರಥಿ ರಾಮಚಂದ್ರನಿಗೆ
ಸಾಸಿರದ್ಹರಿನಾರುನೂರೆಂಟು ಹೆಂಗಳ
ಮೋಸಮಾಡಿದ ನಮ್ಮ ಬುದ್ಧನಿಗೆ ||

ವಾಜಿಯನೇರಿದ ಮುಜ್ಜಗದೊಡೆಯಗೆ
ಪೂಜಿತಚರಣಸರೋಜನಿಗೆ
ರಾಜಿತ ಪುರಂದರವಿಟ್ಠಲರಾಯಗೆ
ರಾಜಾಧಿರಾಜ ಸರ್ವೇಶಗೆ ||
*******