ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ || ಪ ||
ತೋರಯ್ಯ ನಿನ್ನ ದಯ ತೋಯಜಾಂಬಕನೆ || ಅ.ಪ. ||
ದುರುಳರ ತರಿವಂಥ ವರಚಕ್ರಧಾರಿ
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ || 1 ||
ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ
ತರಳ ಪ್ರಹ್ಲಾದನ್ನ ವೈರಿಯ ಮುರದಿ || 2 ||
ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ || 3 ||
ಅನಂತನಾಮನೆ ನಿನ್ನ ಅನಂತ ಸದ್ಗುಣವ
ನೆನೆವರಿಗೊಲಿವಂಥ ಪವಮಾನನೀಶಾ || 4 ||
ಅಜಭವಾಧಿಪ ನೀನು ವಿಜಯಸಾರಥಿಯೇ
ತ್ರಿಜಗವಂದಿತ ಈಶ ವಿಜಯವಿಠ್ಠಲನೇ || 5 ||
***
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ || ಪ ||
ತೋರಯ್ಯ ನಿನ್ನ ಪಾದ ತೋಯಜಾಂಬಕನೆ || ಅ.ಪ. ||
ದುರುಳರ ತರಿವಂಥ ವರಚಕ್ರಧಾರಿ
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ || 1 ||
ಅರಣ್ಯದಿ ಮೊರೆಯಿಟ್ಟ ಕರಿರಾಜಗೊಲಿದಿ
ತರಳ ಪ್ರಹ್ಲಾದನ್ನ ವೈರಿಯ ಮುರದಿ || 2 ||
ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ || 3 ||
ಅನಂತನಾಮನೆ ನಿನ್ನ ಅನಂತ ಸದ್ಗುಣವ
ನೆನೆವರಿಗೊಲಿವಂಥ ಪವಮಾನನೀಶಾ || 4 ||
ಅಜಭವಾಧಿಪ ನೀನು ವಿಜಯಸಾರಥಿಯೇ
ತ್ರಿಜಗವಂದಿತ ಈಶ ವಿಜಯವಿಠ್ಠಲನೇ || 5 ||
***
Bārayya śrīnivāsa bhaktara baḷige || pa ||
tōrayya ninna pāda tōyajāmbakane || a.Pa. ||
Duruḷara tarivantha varacakradhāri paramātma parabom’ma pararigupakāri || 1 ||
araṇyadi moreyiṭṭa karirājagolidi taraḷa prahlādanna vairiya muradi || 2 ||
vara ṣōḍaśa giriyalli niruta nīniruvi haridāsaru karedare elliddare baruvi || 3 ||
anantanāmane ninna ananta sadguṇava nenevarigolivantha pavamānanīśā || 4 ||
ajabhavādhipa nīnu vijayasārathiyē trijagavandita īśa vijayaviṭhṭhalanē || 5 ||
Plain English
Barayya srinivasa bhaktara balige || pa ||
torayya ninna pada toyajambakane || a.Pa. ||
Durulara tarivantha varacakradhari paramatma parabom’ma pararigupakari || 1 ||
aranyadi moreyitta karirajagolidi tarala prahladanna vairiya muradi || 2 ||
vara sodasa giriyalli niruta niniruvi haridasaru karedare elliddare baruvi || 3 ||
anantanamane ninna ananta sadgunava nenevarigolivantha pavamananisa || 4 ||
ajabhavadhipa ninu vijayasarathiye trijagavandita isa vijayaviththalane || 5 ||
******