RSS song .
ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ ||ಪ||
ಭಾರತ ಮಾತೆಯ ಕುವರ ಕಿಶೋರರು ಬಂದು ಸೇರಿದೆವು ಒಂದಾಗಿ
ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ
ಓ ಹಗಲುಗಳೇ ಬಿಳಿ ಮುಗಿಲುಗಳೇ ಸುಳಿಗಾಳಿಯ ಅಲೆಗಳೇ ಹರಸಿ
ಬಂಧುತ್ವದ ಧ್ಯೇಯ ರಕ್ಷೆಗಳೇ ಅಂತರಂಗವನು ಆವರಿಸಿ ||೧||
ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಧೀರುತೆಯನ್ನಳಿಸಿ
ಸ್ನೇಹ ಸಲಿಲಗಳೇ ಜ್ಞಾನ ಶ್ರೋತಗಳೇ ನಾಡಿ ನಾಡಿಯಲಿ ಸಂಚರಿಸಿ ||೨||
ನಾಳೆ ನಾಳೆಗಳು ಕಳೆದರು ಹೊಳೆಯುವ ಅಕ್ಷರಕ್ಷರವು ಬಂಗಾರ
ಬೆವರಿನ ಗೆರೆಗಳು ನೆತ್ತರ ಹೂಗಳು ಧೃತಿಯು ಮತಿಯು ಶೃಂಗಾರ ||೩||
***
sAhasaditihAsava bareyONa hosabALina hALeya tereyONa ||pa||
BArata mAteya kuvara kiSOraru baMdu sEridevu oMdAgi
dESa dharmagaLa Ganateya sAralu duDivevu nuDivevu oMdAgi
O hagalugaLE biLi mugilugaLE suLigALiya alegaLE harasi
baMdhutvada dhyEya rakShegaLE aMtaraMgavanu Avarisi ||1||
dhairyada sthairyada O mErugaLE beLeyiri dhIruteyannaLisi
snEha salilagaLE j~jAna SrOtagaLE nADi nADiyali saMcarisi ||2||
nALe nALegaLu kaLedaru hoLeyuva akSharakSharavu baMgAra
bevarina geregaLu nettara hUgaLu dhRutiyu matiyu SRuMgAra ||3||
***