Showing posts with label ಕಮಲ ಭವನ ಪ್ರಿಯ ರಾಣಿ ವಿಮಲಮತಿಯ ನೀ ಕರುಣಿಸು ಜಾಣೆ gadugina veeranarayana. Show all posts
Showing posts with label ಕಮಲ ಭವನ ಪ್ರಿಯ ರಾಣಿ ವಿಮಲಮತಿಯ ನೀ ಕರುಣಿಸು ಜಾಣೆ gadugina veeranarayana. Show all posts

Wednesday 1 September 2021

ಕಮಲ ಭವನ ಪ್ರಿಯ ರಾಣಿ ವಿಮಲಮತಿಯ ನೀ ಕರುಣಿಸು ಜಾಣೆ ankita gadugina veeranarayana

 ..

kruti by ವೀರನಾರಾಯಣ Veeranarayana 

ಸರಸ್ವತಿ


ಕಮಲಭವನ ಪ್ರಿಯ ರಾಣಿ ಪ


ವಿಮಲಮತಿಯ ನೀ ಕರುಣಿಸು ಜಾಣೆ ಅ.ಪ.


ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ 1


ವಿವಿಧ ಭಾಷೆಗಳೊಡತಿಯಾಗಿ ಬಲುವಿವಿಧ ಬಣ್ಣಗಳ ಕಣ್ಣೊಳು ಹೊಳೆಯಲುಪವಣಿಸಿ ಗರಿಗಳ ಪಸರಿಸಿ ಕುಣಿಯಲುನವಿಲನೇರುವ ಪನ್ನಗ ವೇಣಿ 2


ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನವೀರನಾರಾಯಣನ ಸೊಸೆಯೆ ಸುವಾಣಿ 3

***